ಕೂಡ್ಲಿಗಿ : ಶತಾಯುಷಿ ಪೆನ್ನಮ್ಮ ಮತದಾನ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.7 :- ತಾಲೂಕಿನ ಹುಲಿಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಾಯುಷಿ ಪೆನ್ನಮ್ಮ (105) ತಮ್ಮ ಇಳೀ ವಯಸ್ಸಿನಲ್ಲೂ ಮತಗಟ್ಟೆಗೆ ತೆರಳಿ ತನ್ನ ಸಂವಿಧಾನ ಬದ್ದ ಹಕ್ಕನ್ನು ಚಲಾಯಿಸಿ ಯುವಪೀಳಿಗೆಗೆ ಮಾದರಿಯಾದರು.
ಹೌದು 85ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ಮಾಡುವ ಹಕ್ಕನ್ನು ಚುನಾವಣಾ ಆಯೋಗ ನೀಡಲಾಗಿತ್ತಾದರೂ ಅಂದು ಮನೆಯಲ್ಲಿ ಮತದಾನ ಮಾಡದೆ ಇಂದು ಚುನಾವಣೆ ಪ್ರಕ್ರಿಯೆ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ತಾವೇ ಸ್ವತಃ
ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿರುವ ಮತಗಟ್ಟೆ ಸಂಖ್ಯೆ 96ಕ್ಕೆ ತೆರಳಿದ  ಸುಮಾರು 105ರ  ಇಳೀ  ವಯಸ್ಸಿನ ಪೆನ್ನಮ್ಮ ತಮ್ಮ ಸಂವಿಧಾನಿಕ ಹಕ್ಕನ್ನು ಚಲಾಯಿಸಿ ಯುವ ಪೀಳಿಗೆಯ ಮತದಾರರಿಗೆ ಮಾದರಿಯಾಗಿದ್ದಾರೆ.