ಶಾಸಕ ಯತ್ನಾಳ ಕುಟುಂಬ ಸಮೇತ ಮತ ಚಲಾವಣೆ
ವಿಜಯಪುರ,ಮೇ.7:ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕುಟುಂಬ ಸಮೇತ ನಗರದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇರುವ ಮತ ಕೇಂದ್ರ 70ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಸರತಿ ಸಾಲಿನಲ್ಲಿ ನಿಂತು ಪತ್ನಿ ಶೈಲಜಾ ಪಾಟೀಲ ಹಾಗೂ ಪುತ್ರ ರಾಮನಗೌಡ ಪಾಟೀಲ ಅವರೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.