ಮತಗಟ್ಟೆ ಸಿಬ್ಬಂದಿಗೆ ಸ್ಥಳದಲ್ಲೇ ಊಟದ ವ್ಯವಸ್ಥೆ
ಕಲಬುರಗಿ:ಮೇ.7: ಇಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಸರಕಾರಿ ಶಾಲೆ ಆವರಣದ ಮತಗಟ್ಟೆ ಸಂಖ್ಯೆಗಳಾದ 88, 89, 90 ಮತ್ತು 91ರಲ್ಲಿ ಮತಗಟ್ಟೆ ಸಿಬ್ಬಂದಿಗಾಗಿ ಪ್ರತ್ಯೇಕವಾಗಿ ಊಟ ಸಿದ್ಧತೆಗೆ ವ್ಯವಸ್ಥೆ ಮಾಡಲಾಗಿದೆ.
ಅಕ್ಷರ ದಾಸೋಹ ಸಿಬ್ಬಂದಿಗೆ ಅಡುಗೆ ತಯಾರಿಕೆಯ ಜವಾಬ್ದಾರಿ ವಹಿಸಲಾಗಿದ್ದು, ಬೆಳಗ್ಗೆ ಉಪ್ಪಿಟ್ಟು ಹಾಗೂ ಮಧ್ಯಾಹ್ನದ ಊಟಕ್ಕಾಗಿ ಚಪಾತಿ, ಬದನೆಕಾಯಿ ಪಲ್ಯ, ಅನ್ನ ಮತ್ತು ಸಾರಿನ ಜೊತೆಗೆ ಉಪ್ಪಿನಕಾಯಿ ವ್ಯವಸ್ಥೆ ಮಾಡಲಾಗಿದೆ.
ಇದೇ ಊಟವನ್ನು ಮತಗಟ್ಟೆಯಲ್ಲಿ ಕರ್ತವ್ಯನಿರತ ಪೆÇಲೀಸ್ ಸಿಬ್ಬಂದಿಗೂ ನೀಡಲಾಗುತ್ತಿದೆ ಎಂದು ಮತಗಟ್ಟೆ ಅಧಿಕಾರಿಗಳು ಮಾಹಿತಿ ನೀಡಿದರು