ಅಲಂಕೃತಗೊಂಡಿರುವ  ಮತದಾನ ಕೇಂದ್ರಗಳು
ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.07 : ಲೋಕಸಭಾ ಚುನಾವಣೆ ಇಂದು 2ನೇ ಹಂತದ ಮತದಾನ ಆರಂಭವಾಗಿದ್ದು, ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ತೆರೆಯಲಾದ ಮಾದರಿ ಮತಗಟ್ಟೆ ಅಲಂಕೃತಗೊಂಡು ಮತದಾರರನ್ನು ಸೆಳೆಯುತ್ತಿದೆ. ಮತಗಟ್ಟೆ ಬಲೂನ್ ಗಳು, ವಿದ್ಯುತ್ ದೀಪಾಲಂಕಾರ ಗೊಂಡಿದ್ದು ಕಣ್ಮನಸೆಳೆಯುತ್ತಿದೆ. ವರ್ಲಿ ಪೇಯಿಂಟಿಂಗ್, ಆಕರ್ಷಕ ರಂಗೋಲಿ, ಮತದಾನ ಜಾಗೃತಿ ಶ್ಲೋಘನ್ ಗಳು, ಜಾಗೃತಿ ಫಲಕಗಳೊಂದಿಗೆ ಮತಗಟ್ಟೆ ಆಕರ್ಷಿತಗೊಂಡಿದೆ. ‘ಆಮಿಷಕ್ಕೆ ಮರುಳಾಗದಿರಿ: ಯೋಚಿಸಿ ಮತಚಲಾಯಿಸಿ’, ‘ನಮ್ಮ ನಡೆ-ಮತಗಟ್ಟೆ ಕಡೆ’, ‘ನಮ್ಮ ಮತ, ನಮ್ಮ ಹಕ್ಕು’, ಎಂಬ ಮತದಾನ ಜಾಗೃತಿ ಬರಹ ಬರೆಯಿಸಲಾಗಿದೆ.  ಬಸಾಪಟ್ಟಣ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ವಿದ್ಯಾವತಿ ಅವರು ಮತಗಟ್ಟೆ ಮುಂಭಾಗ ಬಿಡಿಸಿದ ಮತದಾನ ಜಾಗೃತಿ ರಂಗೋಲಿ ಅತ್ಯಾಕರ್ಷಕವಾಗಿದೆ.
ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿ ಕೃಷಿ ತರಬೇತಿ ಕೇಂದ್ರ, ನಗರದ ಪಂಪಾನಗರದ ಸರೋಜಜಮ್ಮ ಕಾಲೇಜ್, ಎಪಿಎಂಸಿ ಬಲಭಾಗದಲ್ಲಿ, ಸರಕಾರಿ ಬಾಲಕಿಯರ ಶಾಲೆಯಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಯುವ ಮತಗಟ್ಟೆಯನ್ನು ನಗರದ ಎಇಇ, ಪಿಡಬ್ಲೂಡಿ ಕಛೇರಿಯಲ್ಲಿ ತೆರಯಲಾಗಿದೆ. ವಿಕಲಚೇತನ ಸ್ನೇಗಿ ಮತಗಟ್ಟೆಯನ್ನು ವೆಂಕಟಗಿರಿ ಗ್ರಾಮ ಪಂಚಾಯತಿ ಕಟ್ಟಡದಲ್ಲಿ ತೆರಲಾಗಿದ್ದು, ಮತದಾರನ್ನು ಆಕರ್ಷಕವಾಗಿ ಸೆಳೆಯುತ್ತಿವೆ.
ತಾಲೂಕಿನಲ್ಲೆಯಡೆ ಬೆಳಿಗ್ಗೆಯಿಂದ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.