ಮೋದಿ‌ಯವರ 400 ಸ್ಥಾನಗಳಲ್ಲಿ ನಾನೊಬ್ಬನು: ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.07: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ‌ಯವರ 400 ಸ್ಥಾನಗಳಲ್ಲಿ ನಾನೊಬ್ಬನು ಆಗುವೆನು ಎನ್ನುವ ವಿಶ್ವಾಸವನ್ನು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಚೇರಿಯ ಮತಗಟ್ಟೆಯಲ್ಲಿ ಪತ್ನಿ ಮಕ್ಕಳೊಂದಿಗೆ ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಬಾರಿ‌ನನ್ನ ಗೆಲುವಿಗೆ ಉತ್ತಮ
ವಾತಾವರಣವಿದೆ. ಪ್ರಧಾನಿ‌ ನರೇಂದ್ರ  ಮೋದಿಯವರ ಗಾಳಿ‌, ಯಡಿಯೂರಪ್ಪ  ಅವರ ಸಂಕಲ್ಪ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡ ಹಬ್ಬ. ಯುವಕರೆಲ್ಲ ಮತದಾನಕ್ಕೆ ಆಗಮಿಸಿ.‌‌.ಶ್ರೇಷ್ಡ ಭಾರತ ನಿರ್ಮಾಣ ಮಾಡಲು ಮತದಾನ ಮಾಡಲು ಕರೆ ನೀಡಿದ ಅವರು. ಉತ್ತಮ ಅಡಳಿತ ಕೊಡುವ ಕೆಲಸಕ್ಕೆ ಯುವ ಮತದಾರರು ಮತದಾನ  ಮಾಡಬೇಕೆಂದರು.
ಸರಿಯಲ್ಲ:
ಪ್ರಜ್ವಲ್ ರೇವಣ್ಣನವರ ಪ್ರಕರಣದ ತನಿಖೆಯನ್ನು ತನಿಖಾ ಸಂಸ್ಥೆಗಳು ಮಾಡುತ್ತವೆ.. ಈ ಸಂದರ್ಭದಲ್ಲಿ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ.