ಬಳ್ಳಾರಿ: ಚುನಾವಣೆಯಲ್ಲಿ ಧರ್ಮಕ್ಕೆ ಜಯಕಾಂಗ್ರೆಸ್ ಧರ್ಮದ ಪರವಾಗಿದೆ: ನಾಗೇಂದ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನೇ.07: ಪ್ರಸಕ್ತ ಚುನಾವಣೆಯಲ್ಲಿ ಧರ್ಮಕ್ಕೆ ಜಯವಾಗಲಿದ್ದು. ಕಾಂಗ್ರೆಸ್ ಧರ್ಮದ ಪರವಾಗಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಅವರು ಮತದಾನ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಬಿಸಿಲು ಲೆಕ್ಕಿಸದೆ ಜನ ಮತದಾನ ಮಾಡ್ತಿದ್ದಾರೆ. ಗ್ಯಾರಂಟಿಗಳಿಂದ ಮಹಿಳೆಯರು ಹೆಚ್ಚು ಮತದಾನ ಮಾಡ್ತಿದ್ದಾರೆ.  ಕ್ಷೇತ್ರದಲ್ಲಿ ಶೇ 70 ಕ್ಕಿಂತ ಹೆಚ್ಚು ಮತದಾನ ಆಗೋ ವಿಶ್ವಾಸವಿದೆ. ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಗೆಲುವು ಖಚಿತ ಎಂದರು.
ಬಿಜೆಯಿಯ ರಾಜಕೀಯ:
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ. ಬಿಜೆಪಿ  ರಾಜಕೀಯ ಮಾಡ್ತಿದೆ ಸಧ್ಯ ಎಸ್ ಐಟಿಯಿಂದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಬಿಜೆಪಿ ಅನವಶ್ಯಕ ರಾಜಕೀಯ ಮಾಡ್ತಿದೆ.
ಈ ಘಟನೆಯಿಂದ ಬಿಜೆಪಿ ಜೆಡಿಎಸ್ ಅಲೈನ್ಸ್ ಮೇಲೆ ಹೊಡೆತ ಬಿದ್ದಿದೆ. ಅದಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡ್ತಿದ್ದಾರೆ. ಪ್ರಸಕ್ತ ಚುನಾವಣೆ  ಮೇಲೆ ಈ  ಘಟನೆ ಪ್ರಭಾವ ಬೀರಿದೆ. ಅದಕ್ಕಾಗಿ
ಬಿಜೆಪಿಯವರುವಸೋಲಿನ ಹತಾಶೆಯಿಂದ ಮಾತಾಡ್ತಿದ್ದಾರೆ.ಮಾಡಿದ ಕೃತ್ಯವನ್ನ ಬಿಜೆಪಿ ಸಮರ್ಥಿಸಿಕೊಳ್ತಿದ್ದಾರೆ. ಇಲ್ಲಿ ಯಾವ ಷಡ್ಯಂತರವೂ ಇಲ್ಲ. ಪಾಪ ಮಾಡಿದವರು ಅನುಭಸುತ್ತಾರೆಂದ ಅವರು ಮಹಾನಾಯಕ ಅಂದ್ರೆ  ಯಾರು ನಾವು ಕಾತುರದಿಂದ ಕಾಯುತ್ತಿದ್ದೇವೆ
ಬಿಜೆಪಿಯ ಮಹಾನಾಯಕ ನಾ…. ಅಥವಾ ಜೆಡಿಎಸ್ ಪಕ್ಷ ಮಹಾನಾಯಕನಾ…ಎಂದರು.
ಪೆನ್ ಡ್ರೂ ಬಿಡುಗಡೆಯಲ್ಲಿ ಯಾರು ಭಾಗಿಯಾಗಿಲ್ಲ ಎಂದು ಪ್ರಜ್ವಲ್  ಅವರ ಡ್ರೈವರ್ ಹೇಳಿಕೆ ಕೊಟ್ಟಿದ್ದಾರೆ.ಇದು ನನ್ನ ವಯಕ್ತಿಕ ಅಂತಾ ಪ್ರಜ್ವಲ್ ಡ್ರೈವರ್ ಸ್ಪಷ್ಟಪಡಿಸಿದ್ದಾರೆ. ಆದರೂ  ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಆರ್. ಅಶೋಕ್ ಅವರು ಹೇಳಿಕೆ ಕೊಡುವುದು ಸರಿಯಲ್ಲ. ಡಿಕೆಶಿ  ಅವರ ಮೇಲೆ ಆರೋಪ ಸರಿಯಲ್ಲ
ಡಿಕೆಶಿ ಯಾವುದೆ ತಪ್ಪು ಮಾಡಿಲ್ಲ ಅವರ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡರು.