ಗಮನ ಸೆಳೆದ ಸಖಿ ಮತಗಟ್ಟೆ
ಔರಾದ : ಮೇ.7:ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರ ಗಮನ ಸೆಳೆಯಲು ಗುಲಾಬಿ ಬಣ್ಣದ ಅಲಂಕಾರಿಕಾ ವಸ್ತುಗಳಿಂದ ನಿರ್ಮಿಸಿರುವ ‘ಸಖಿ’ ಮತಗಟ್ಟೆಗಳು ಪಟ್ಟಣದಲ್ಲಿಯೇ ಆಕರ್ಷೀಣಿಯ ಕೇಂದ್ರವಾಗಿ ಕಂಡು ಬಂದವು.
ಔರಾದ ಪಟ್ಟಣದ ವ್ಯಾಪ್ತಿಯಲ್ಲಿಯೇ ಮೂರು ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳೆಂದು ಗುರುತಿಸಿ ವಿಶೇಷವಾದ ದೀಪಾಲಂಕಾರ, ಬಲೂನು ಮತ್ತು ಬಣ್ಣದ ಹಾಳೆಗಳಿಂದ ಝಗಮಗಿಸುವಂತ ದೃಶ್ಯಾವಳಿಗಳನ್ನು ಅಲಂಕರಿಸಿದನ್ನು ನೋಡಿದ ಮಹಿಳೆಯರು ಮತದಾನದಲ್ಲಿ ಆಸಕ್ತಿ ಮೂಡುವಂತೆ ಮಾಡಿತು.
ಬೀರು ಬಿಸಿಲಿನ ನಡುವೆ ಬೆಳಿಗ್ಗೆಯಿಂದಲೇ ಮಹಿಳೆಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು, ಬೇಸಿಗೆ ಬಿಸಿಲಿನ ಅಂಗವಾಗಿ ಪ್ರತಿ ಮತಗಟ್ಟೆಗಳಲ್ಲಿ
ಮತದಾರರು ವಿಶ್ರಾಂತಿ ಪಡೆಯಲು ಪೆಂಡಾಲ ವ್ಯವಸ್ಥೆ ಮಾಡಲಾಗಿದೆ.