ಮತ ಚಲಾಯಿಸಿದ ಶಾಸಕ ಚವ್ಹಾಣ
ಔರಾದ :ಮೇ.7: ಲೋಕಸಭಾ ಚುನಾವಣೆ ಅಂಗವಾಗಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಇಂದು ಬೆಳಿಗ್ಗೆ ತಾಲೂಕಿನ ಬೊಂತಿ ಗ್ರಾಮದ ಮತಗಟ್ಟೆ ಸಂಖ್ಯೆ 31 ರಲ್ಲಿ ಕುಟುಂಬ ಸಮೇತವಾಗಿ ತೆರಳಿ ಮತ ಚಲಾಯಿಸಿದರು.
ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ಪ್ರಚಾರ ಸಭೆಯಿಂದ ದೂರವಿದ್ದ ಶಾಸಕರು ಇಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಎಲ್ಲರೂ ಬೇಗ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಂದು ಮನವಿ ಮಾಡಿದರು.