100 ಗ್ರಾಂ ಚಿನ್ನ ಸುಲಿಗೆ ಆಟೋ ಚಾಲಕ ಸೆರೆ
ಬೆಂಗಳೂರು,ಮೇ.೭-ತಂದೆ ನಿಂದಿಸಿದ ಕೋಪದಲ್ಲಿ ಮನೆ ಬಿಟ್ಟು ಓಡಿ ಹೋಗುತ್ತಿದ್ದ ವಿದ್ಯಾರ್ಥಿಯ ಬಳಿ ೧೦೦ ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಖತರ್ನಾಕ್ ಆಟೋ ಚಾಲಕನನ್ನು ಎಚ್‌ಎಎಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರಣ್ಯಪುರದ ಎಂಎಸ್ ಪಾಳ್ಯದ ಆಟೋ ಚಾಲಕ ಸಾಧಿಕ ಅಲಿಯಾಸ್ ಅನಿಲ್ ಬಂಧಿತ ಆರೋಪಿಯಾಗಿದ್ದು, ಆತ ಸುಲಿಗೆ ಮಾಡಿ ಮುತ್ತೂಟ್ ಫೈನಾನ್ಸ್ ನಲ್ಲಿ ಗಿರಿವಿಯಿಟ್ಟಿದ್ದ ೯೧ ಗ್ರಾಂ ಚಿನ್ನದ ಚೈನ್,೮.೩ ಗ್ರಾಂ ಉಂಗುರ ಸೇರಿ ೬.೫೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಏ.೧ರಂದು ರಾತ್ರಿ ದೊಡ್ಡನಕ್ಕುಂದಿಯ ಕಾಲೇಜ್‌ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಗೆ ಹಲವು ಸ್ನೇಹಿತರಿದ್ದು ಇದನ್ನು ತಿಳಿದ ತಂದೆ ಸ್ನೇಹಿತರ ಓಡನಾಟವನ್ನು ಕಡಿಮೆ ಮಾಡುವಂತೆ ಬೈದು ಬುದ್ಧಿ ಹೇಳಿದ್ದರು. ಇದರಿಂದ ಬೇಸತ್ತ ವಿದ್ಯಾರ್ಥಿಯು ಕೋಪಗೊಂಡು ಮರುದಿನ ಮುಂಜಾನೆ ಮನೆ ಬಿಟ್ಟು ಹೋಗಿದ್ದ ಈಸಂಬಂಧ ವಿದ್ಯಾರ್ಥಿಯ ತಾಯಿಯ ತಮ್ಮ ಏ.೪ ರಂದು ಎಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಪ್ರಕರಣ ದಾಖಲಾಗಿತ್ತು.ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಕಾಣ ಯಾದ ಯುವಕನು ಪುರಿ ಜಗನ್ನಾಥ ದೇವಸ್ಥಾನ ಬಳಿ ಇರುವುದನ್ನು ಖಚಿತ ಪಡಿಸಿಕೊಂಡು ಏ.೬ ರ ರಾತ್ರಿ ಬೆಂಗಳೂರಿಗೆ ಕರೆತಂದು ಪೋಷಕರಿಗೆ ಒಪ್ಪಿಸಿರುತ್ತಾರೆ. ಕೆಲವು ದಿನಗಳ ನಂತರ ವಿದ್ಯಾರ್ಥಿಯ ಮನೆಯಲ್ಲಿ ಆತನ ಚಿಕ್ಕಪ್ಪನು ಆತ ಧರಿಸುತ್ತಿದ್ದ, ಚಿನ್ನದ ಚೈನ್ ಮತ್ತು ಉಂಗುರದ ಬಗ್ಗೆ ವಿಚಾರಿಸಿದಾಗ ಆಟೋ ಚಾಲಕನು ಚಿನ್ನವನ್ನು ಇಟ್ಟಿದ್ದ ಬ್ಯಾಗ್‌ನ್ನು ಕಿತ್ತುಕೊಂಡ ಬಗ್ಗೆ ತಿಳಿಸಿದ್ದಾನೆ.
ಈ ಸಂಬಂಧ ಮತ್ತೆ ನೀಡಿದ ದೂರು ದಾಖಲಿಸಿ ತನಿಖೆ ಕೈಗೊಂಡಾಗ ವಿದ್ಯಾರ್ಥಿಯು ದೊಡ್ಡನಕ್ಕುಂದಿಯ ಬಸವನಗರ ಬಸ್ ನಿಲ್ದಾಣದಲ್ಲಿ ಆಟೋದಲ್ಲಿ ಮೆಜೆಸ್ಟಿಕ್‌ಗೆ ಹೊರ
ಟಾಗ ಮಾರ್ಗಮಧ್ಯದಲ್ಲಿ ತಾನು ಧರಿಸಿದ್ದ ಒಂದು ಚಿನ್ನದ ಸರ ಹಾಗೂ ಒಂದು ಉಂಗುರವನ್ನು ಬಿಚ್ಚಿ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಾನೆ.
ಇದನ್ನು ಗಮನಿಸಿದ ಬಂಧಿತ ಆಟೋ ಚಾಲಕನು ಆಟೋವನ್ನು ಸ್ವಲ್ಪ ದೂರ ಚಾಲನೆ ಮಾಡಿ, ರಮೇಶ್ ನಗರದ ಮುಖ್ಯರಸ್ತೆಯ ಬಳಿ ಬಂದಾಗ ಮೂತ್ರ ವಿಸರ್ಜನೆ ನೆಪಮಾಡಿ ಆಟೋವನ್ನು ನಿಲ್ಲಿಸಿದ್ದು, ವಿದ್ಯಾರ್ಥಿಯು ಸಹ ಬ್ಯಾಗಿನೊಂದಿಗೆ ಇಳಿದು ಮೂತ್ರ ವಿಸರ್ಜನೆಗೆ ಸ್ವಲ್ಪ ದೂರ ಹೋದಾಗ ಆಟೋದೊಂದಿಗೆ ಆತನ ಬಳಿ ಬಂದ ಚಾಲಕ ಆತನ ಕೈಯಲ್ಲಿದ್ದ ಒಡವೆಗಳಿದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿರುವುದು ಪತ್ತೆಯಾಗಿದ್ದು, ತಕ್ಷಣವೇ ಕಾರ್ಯಾಚರಣೆ ಕೈ
ಗೊಂಡ ಪೊಲೀಸರು,
sಹಲವಾರು ಸ್ಥಳೀಯ ಸಿ.ಸಿ. ಕ್ಯಾಮಾರಗಳನ್ನು ಪರಿಶೀಲಿಸಿ, ಆರೋಪಿತನ ಆಟೋ ನಂಬರ್ ಪತ್ತೆಹಚ್ಚಿ ಎಂಎಸ್ ಪಾಳ್ಯದ ಮನೆಯ ಬಳಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಲಿಗೆ ಮಾಡಿದ ಒಡವೆಗಳನ್ನು ತನ್ನ ಪತ್ನಿಯ ಹೆಸರಿನಲ್ಲಿ ವಿದ್ಯಾರಣ್ಯಪುರದ ಮುತ್ತೂಟ್ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿರುವುದಾಗಿ ತಿಳಿಸಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ವೈಟ್‌ಫೀಲ್ಡ್ ಡಿಸಿಪಿ ಡಾ.ಶಿವಕುಮಾರ್, ಅವರ ನೇತೃತ್ವದಲ್ಲಿ ಎಚ್‌ಎಎಲ್ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸು
ವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.