ಯಶಸ್ವಿಯಾಗಿ ಜರುಗಿದ ರೆಡ್ ಕ್ರಾಸ್ ಸಂಸ್ಥೆಯ ‘ಮಾನವಿಯತೆಗಾಗಿ ನಡೆಯಿರಿ’ ರ್ಯಾಲಿ
ಬೀದರ:ಸೆ.22:ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ ಜಿಲ್ಲಾ ಶಾಖೆಯ ವತಿಯಿಂದ ಅಂತರರಾಷ್ಟೀಯ ಶಾಂತಿ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಮಾನವಿಯತೆಗಾಗಿ ನಡೆಯಿರಿ-‘ವಾಕ್-ಎ-ಥಾನ್’ ರ್ಯಾಲಿಯು ಯಶಸ್ವಿಯಾಗಿ ಜರುಗಿತು. ಶನಿವಾರದಂದು ನಗರದ ಬಿ.ವಿ.ಬಿ. ಮಹಾವಿದ್ಯಾಲಯದ ದಿಂದ ಪ್ರಾರಂಭ ಗೂಂಡ ರ್ಯಾಲಿಯು ಶ್ರೀ ಬೊಮ್ಮಗೊಂಡೇಶ್ವರ ವೃತ್ತದ ವರೆಗೆ ತಲುಪಿ ಅಲ್ಲಿಂದ ಮರಳಿ ವಿದ್ಯಾ ನಗರದ ವಿ. ಕೆ. ಇಂಟರನ್ಯಾಷನಲ್ ಶಾಲೆ ಆವರಣಕ್ಕೆ ಮರಳಿ ಮುಕ್ತಾಯಗೊಂಡಿತ್ತು. ರ್ಯಾಲಿಯಲ್ಲಿ ನಗರದ ವಿವಿಧ ಶಾಲಾ-ಕಾಲೇಜುಗಳಿಂದÀ ಎನ್.ಸಿ.ಸಿ ಕ್ಯಾಡೆಟ್ಸ್, ಎನ್.ಎಸ್.ಎಸ್. ಸ್ವಯಂಸೇವಕರು, ವಾದ್ಯತಂಡದವರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರ್ಯಾಲಿಯುದ್ದಕೂ ‘ಭಾರತ ಮಾತೆಗೆ ಜಯವಾಗಲಿ’, ‘ವಿಶ್ವ ಶಾಂತಿಗಾಗಿ ನಮ್ಮ ನಡೆ’ ‘ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಜಯವಾಗಲಿ’ ‘ಮಾನವಿಯತೆ ಬೆಳೆಯಲಿ ವಿಶ್ವ ಬೆಳಗಲಿ’ ಜಯಘೋಷಗಳು ಮೊಳಗಿದವು.
ರ್ಯಾಲಿಯನ್ನು ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಠಲರೆಡ್ಡಿ ಅವರು ಉದ್ಘಾಟಿಸಿ ಇಂದು ಮನುಷ್ಯನ ಅಧಿಕಾರದ ದಾಹ ಹಾಗೂ ಸ್ವಾರ್ಥದಿಂದ ವಿಶ್ವದಲ್ಲಿ ಯುದ್ಧಗಳು, ಭಯೋತ್ಪಾದಕ ದಾಳಿಗಳು, ಅತ್ಯಾಚಾರಗಳು ನಡೆಯುತ್ತಿವೆ, ಇವುಗಳನ್ನು ತಡೆಬೇಕಾದರೆ ವಿಶ್ವಶಾಂತಿ ತತ್ವ, ಮಾನವಿಯ ಮೌಲ್ಯಗಳನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಡಾ ವಿದ್ಯಾ ಪಾಟೀಲ ಅವರು ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ಪ್ರೌಡ ಶಾಲೆಗಳಲ್ಲಿ ಮತ್ತು ಪದವಿ-ಪೂರ್ವ ಕಾಲೇಜುಗಳಲ್ಲಿ ಜೂನಿಯರ್ ರೆಡ್ ಕ್ರಾಸ್ ಸಂಸ್ಥೆಗಳ ಮೂಲಕ ಹಾಗೂ ಪದವಿ ಕಾಲೇಜುಗಳಿಲ್ಲಿ ಯೂತ್ ರೆಡ್ ಕ್ರ್ರಾಸ್ ವಿಂಗ್ ಮೂಲಕ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸೌಹಾರ್ದತೆಯ ಅರಿವು ಮೂಡಿಸು ಕಾರ್ಯ ಮಾಡುತ್ತಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಡಾ ವೀರಶೆಟ್ಟಿ ಮೈಲೂರಕರ್ ಮನುಷ್ಯನ ಮತ ಬೇಧ ಭಾವನೆಗಳಿಂದ ಕೊಲೆ, ಸುಲಿಗೆ, ರಕ್ತಪಾತದಂತಹ ವಿನಾಶ ಕ್ರಾಂತಿಗಳು, ಉಂಟಾಗುತ್ತಿವೆ. ಇದರಿಂದ ಸಮಾಜದಲ್ಲಿ ಅಶಾಂತಿ, ಸಾವು-ನೋವು ಕಾಡುತ್ತಿವೆ, ಇದನ್ನು ತಡೆಯಲು ಪ್ರತಿಯೊಬ್ಬರು ವಿಶ್ವಶಾಂತಿಗಾಗಿ ಕೈಜೋಡಿಸಬೇಕು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜೆಲ್ಲೆಯ ರಾಜ್ಯ ಪ್ರತಿನಿಧಿ ಡಾ ವೈಜಿನಾಥ ಕಮಠಾಣೆ ಅವರು ಮಾತನಾಡಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಯಾವುದೆ ಜಾತಿ, ಧವರ್i ಎನ್ನದೆ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುತ್ತಿದೆ, ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು. ಉಪಾಧ್ಯಕ್ಷರಾದ ಡಾ ದಿಲೀಪ ಕಮಠಾಣೆ, ಖಜಾಂಚಿ ಡಾ ಸುಮನ ಸಿಂಧೆ, ತಾಲೂಕ ಅಧ್ಯಕ್ಷ ಕಾಮಶೆಟ್ಟಿ ಚಿಕಬಸೆ, ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಪ್ರೋ ಅನೀಲಕುಮಾರ ಆಣದೂರೆ, ಧನರಾಜ ಪಾಟೀಲ, ಯುನುಸ್, ಸಂಗಮೇಶ ನೇಳಗೆ, ವೈಜಿನಾಥ ಪಾಟೀಲ, ಶಾಂತಲಾ ಮೈಲೂರಕರ್, ಜಿಜಾಮಾತ ಪ್ರೌಡ ಶಾಲೆ ಮುಖ್ಯ ಉಪಾಧ್ಯಾಯ ಪರಮೇಶ್ವರ ಬಿರಾದರ, ಅರಣೋದಯ ಪ್ರೌಡ ಶಾಲೆ ಮುಖ್ಯ ಉಪಾಧ್ಯಾಯ ಸಂತೋಷಕುಮಾರ ಮಂಗಳೂರೆ, ಪ್ರೊ. ದೀಪಾ ರಾಗಾ, ಪೂಜಾ ಸಂಗಮದ, ಡಾ ಶಿವಲೀಲಾ ಮಠಪತಿ, ಬಸವರಾಜ ಬಿರಾದರ ವಿ. ಕೆ. ಇಂಟರನ್ಯಾಷನಲ್ ಶಾಲೆಯ ಆಡಳಿತಾಧಿಕಾರಿಗಳು, ಮುಖ್ಯ ಉಪಾಧ್ಯಾಯರು ಸೇರಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಂಡಿದರು. ಸರ್ವರಿಗೂ ಉಪಹಾರ, ಕುಡಿಯುವ ನೀರು, ರೆಡ್ ಕ್ರಾಸ್ ಕ್ಯಾಪ್ ವಿತರಿಸಲಾಯಿತು. ಸಂಚಾರಿ ಪೋಲಿಸ್ ಸಿಬ್ಬಂದಿಯವರ ರ್ಯಾಲಿಯು ಸುಗಮವಾಗಿ ಸಾಗಲು ವ್ಯವಸ್ಥೆ ಕಲ್ಪಿಸಿದರು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಸರ್ವರಿಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು.