ಶುದ್ದ ಕುಡಿಯುವ ನೀರಿನ ಘಟಕಕ್ಕೆ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಭೇಟಿ
ಇಂಡಿ:ಸೆ.22: ಇಡೀ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಭಿರಪ್ಪ ನಗರದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಹಿಂದೆ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಅಲೇದಾಡ ಬೇಕಾಗಿತ್ತು. ಮಹಿಳೆಯರು, ಮಕ್ಕಳು ಪ್ಲಾಸ್ಟಿಕ ಕೊಡ ಹಿಡಿದ್ದು ನೀರಿಗಾಗಿ ದೂರದ ಪ್ರದೇಶ ಹೊಲ, ಗದ್ದೆ ಸುತ್ತಾಡಿದರೂ ಹನಿ ನೀರು ಸಿಗುತ್ತಿರಲ್ಲಿಲ್ಲಾ ಸಾಕಷ್ಟು ಸಂಕಷ್ಟದ ಪರಸ್ಥಿತಿ ಇತ್ತು ನೀರಿಗಾಗಿ ಹಪಹಪಿಸುವ ಪರಸ್ಥಿತಿ ಸದ್ಯ ನಿವಾರಣೆಗಾಗಿದೆ.
2013ರ ನಂತರ ಇಂಡಿ ಮತಕ್ಷೇತ್ರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರ ಹಿಡಿದ ನಂತರ ಪಟ್ಟಣದಲ್ಲಿ 24+7 ಶುದ್ದ ಕುಡಿಯುವ ನೀರು ಭೀಮಾನದಿಯಿಂದ ನಗರಕ್ಕೆ ಸರಬರಾಜು ಮಾಡುವ ಮೂಲಕ ನೀರಿನ ಸಮಸ್ಯ ನಿವಾರಿಸಿದ್ದಾರೆ. ಇಂದು ಮಳೆಗಾಲ ಇರುವದರಿಂದ ಭೀಮಾನದಿಯಿಂದ ನೀರು ಪಟ್ಟಕ್ಕೆ ಸರಬರಾಜು ಆಗುತ್ತಿರುವುದರಿಂದ ಭೀಮಾನದಿಯಲ್ಲಿ ಕಲುಷಿತ ನೀರು ಬರುತ್ತಿದೆ ಆದ್ದರಿಂದ ಪೌರ ಕಾರ್ಮಿಕರು ಶುದ್ದಿ ಕರಣ ಘಟಕದ ಕಡೆ ಹೆಚ್ಚು ಗಮನ ಹರಿಸಬೇಕು. ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿ ನನ್ನ ಅವಧಿಯಲ್ಲಿ ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುತುವರ್ಜಿ ವಹಿಸಬೇಕು ಎಂದು ಪೌರ ಕಾರ್ಮಿಕರಿಗೆ ತಾಕೀತು ಮಾಡಿದರು.