ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ಪ್ಯಾಕೇಜ್ ಟೂರ್
ಸಂಜೆವಾಣಿ ನ್ಯೂಸ್
ಮೈಸೂರು, ಅ.05:- ದಸರಾ ಮಹೋತ್ಸವ 2024 ರ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಅಕ್ಟೋಬರ್ 3 ರಿಂದ 15 ರವರೆಗೆ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರಿನ ಸುತ್ತ-ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಪ್ಯಾಕೇಜ್ ಟೂರ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕರ್ನಾಟಕ ಸಾರಿಗೆ ವಾಹನ ಮಾದರಿಯ ಪ್ಯಾಕೇಜ್ ಟೂರ್‍ಗಳ ವಿವರ:
ಗಿರಿ ದರ್ಶಿನಿ’’ ಪ್ಯಾಕೇಜ್ ಟೂರ್‍ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟವನ್ನು ವೀಕ್ಷಿಸಬಹುದಾಗಿದ್ದು, ವಯಸ್ಕರಿಗೆ ರೂ.400, ಮಕ್ಕಳಿಗೆ ರೂ.250 ಪ್ರಯಾಣದರವಾಗಿರುತ್ತದೆ. ಜಲ ದರ್ಶಿನಿ’’ ಪ್ಯಾಕೇಜ್ ಟೂರ್‍ನಲ್ಲಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಭಿ ಜಲಪಾತ, ರಾಜಸೀಟ್, ಹಾರಂಗಿ ಜಲಾಶಯ ಹಾಗೂ ಕೆ.ಆರ್.ಎಸ್ ಅನ್ನು ವೀಕ್ಷಿಸಬಹುದಾಗಿದ್ದು, ವಯಸ್ಕರಿಗೆ ರೂ.450 ಮತ್ತು ಮಕ್ಕಳಿಗೆ ರೂ.300 ಪ್ರಯಾಣದರವಾಗಿರುತ್ತದೆ.
“ದೇವ ದರ್ಶಿನಿ’’ ಪ್ಯಾಕೇಜ್ ಟೂರ್‍ನಲ್ಲಿ ನಂಜನಗೂಡು, ತಲಕಾಡು, ಬ್ಲಫ್, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಎಸ್ ಅನ್ನು ವೀಕ್ಷಿಸಬಹುದಾಗಿದ್ದು, ವಯಸ್ಕರಿಗೆ ರೂ.300 ಮತ್ತು ಮಕ್ಕಳಿಗೆ ರೂ.200 ಪ್ರಯಾಣದರವಾಗಿರುತ್ತದೆ.
ಪ್ಯಾಕೇಜ್ ಟೂರ್‍ಗಳಿಗೆ ಪ್ರವಾಸಿಗರು ನಿಗಮದ ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ಮತ್ತು ಕೆ.ಎಸ್.ಆರ್.ಟಿ.ಸಿ ಖಾಸಗಿ ಅವತಾರ್ ಬುಕಿಂಗ್ ಕೌಂಟರ್ ಹಾಗೂ ತಿತಿತಿ.ಞsಡಿಣಛಿ.ಞಚಿಡಿಟಿಚಿಣಚಿಞಚಿ.gov.iಟಿ ನ ಮೂಲಕ ಮುಂಗಡ ಆಸನವನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.