ನವೆಂಬರ್‌ನಲ್ಲಿ ಕಮಲಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕಮಲಾಪುರ,ಅ ೫:ತಾಲ್ಲೂಕು ಕೇಂದ್ರ ಕಮಲಾಪುರ ಪಟ್ಟಣದಲ್ಲಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ನವೆಂಬರ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ
ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸುರೇಶ ಲೆಂಗಟಿ ಹೇಳಿದರು.
ಕಮಲಾಪುರದ ಕನ್ನಡ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ಪ್ರಥಮ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗಾಗಿ ಇಲ್ಲಿಯವರೆಗೆ ೬ ಜನ ತಾಲೂಕಿನ ಸಾಹಿತಿಗಳ ಹೆಸರುಗಳ ಪಟ್ಟಿ ಸಿದ್ಧವಾಗಿದ್ದು, ಒಂದೆರಡು ದಿನಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಅಯ್ಕೆ ಮಾಡಲಾಗುವುದು.ಜೊತೆಗೆ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಕಾರ್ಯಾಧ್ಯಕ್ಷರರ ಅಯ್ಕೆ ಸಹ ಎಲ್ಲರ ಒಪ್ಪಿಗೆ ಪಡೆದು ಮಾಡಲಾಗುತ್ತದೆ. ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಮಲಾಪುರ ಯೋಜನಾಧಿಕಾರಿ ಕಲ್ಲಣಗೌಡ ಪಾಟೀಲ್ ಮಾತನಾಡಿ ಸಮ್ಮೇಳನ ಯಶಸ್ಸಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಘಟಕದ ಕೋಶಾಧ್ಯಕ್ಷ ನಾಗಣ್ಣ ವಿಶ್ವಕರ್ಮ ಸ್ವಾಗತಿಸಿದರು.
ಮಹಾಗಾಂವ ಕಸಾಪ ವಲಯದ ಅಧ್ಯಕ್ಷ ಅಂಬಾರಾಯ ಮಡ್ದೆ ನಿರೂಪಿಸಿದರು, ಚೇತನ ಮಹಾಜನ ವಂದಿಸಿದರು.ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮೂಲಗೆ, ಉಪಾಧ್ಯಕ್ಷ ಚನ್ನವೀರ ದಸ್ತಾಪುರ, ರಮೇಶ ಕಟ್ಟಿಮನಿ, ಕಸಾಪ ಗ್ಯಾನಪ್ಪ, , ರೇವಣಸಿದ್ದಪ್ಪ ಇತರರು ಇದ್ದರು.