ಕನಕಮಜಲು ಪರಿಸರದಲ್ಲಿ ಆನೆ ದಾಳಿ – ಕೃಷಿ ನಾಶ
ಸುಳ್ಯ:ಕನಕಮಜಲು ಗ್ರಾಮದ ಕುದ್ಕುಳಿ ಹಾಗೂ ಕೊರಂಬಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ಆನೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆ ನಾಶಗೊಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕನಕಮಜಲು ಗ್ರಾಮದ ಲೋಹಿತ್ ಕುಮಾರ್ ಕುದ್ಕುಳಿ ಅವರ ಕೃಷಿ ತೋಟದಲ್ಲಿ ಎಂಟು ತೆಂಗಿನ ಗಿಡ, ಒಂದು ದೊಡ್ಡ ತೆಂಗಿನ ಮರ, ಇಪ್ಪತ್ತೈದಕ್ಕೂ ಅಧಿಕ ಬಾಳೆ,  ಅಡಕೆ ಸಸಿಗಳಿನ್ನು ನಾಶಗೊಳಿಸಿದೆ. ಅಲ್ಲದೇ ಕೊರಂಬಡ್ಕ ಪದ್ಮನಾಭ ಗೌಡರ ಕೃಷಿ ತೋಟಕ್ಕೂ ದಾಳಿ ನಡೆಸಿದ್ದು, ಅಡಕೆ ತೆಂಗು, ಬಾಳೆಗಿಡಗಳನ್ನು ಪು ಮಾಡಿದೆ.