ಭಗವಂತನ ಆರಾದನೆಯಿಂದ ನೆಮ್ಮದಿ
ವಿಜಯಪುರ.ಮೇ೭:ಮನಸ್ಸು ಎಂಬುದು ಭಗವಂತನ ನಿಲಯ ಮನಸ್ಸಿನಿಂದ ಭಗವಂತನ ಆರಾಧನೆ ಮಾಡಿದರೆ ಹೆಚ್ಚು ಪುಣ್ಯ ಸಿಗುತ್ತದೆ ಎಂಬುದಾಗಿ ಮಳ್ಳೂರಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಪೂರ್ಣಾನಂದ ಗುರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಅಕ್ಕನ ಬಳಗದ ಅರಿವಿನ ಮನೆಯಲ್ಲಿ, ಶ್ರೀ ವೀರಭದ್ರಸ್ವಾಮಿ ಗೋಷ್ಠಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಶಿವಪುರಾಣ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ, ಕೃತಯುಗದಿಂದ ಕಲಿಯುಗದ ವರೆಗೆ ಪುಣ್ಯಕಾರ್ಯಗಳು ನಡೆಯುತ್ತಿವೆ.ಆದರೆ ಕಲಿಯುಗದಲ್ಲಿ ಮಾಡಿದ ಧರ್ಮ ಕಾರ್ಯಗಳಿಗೆ ಕಾಲು ಭಾಗ ಮಾತ್ರ ಪುಣ್ಯ ಸಿಗುತ್ತದೆ ಎಂಬುದಾಗಿ ತಿಳಿಸುತ್ತಾ, ದಾನವನ್ನು ಸತ್ಪಾತ್ರರಿಗೆ ನೀಡಬೇಕು. ಸತ್ಪಾತ್ರರು ಎಂದರೆ ದೊಡ್ಡ ಪಾತ್ರೆಯಲ್ಲಿ ಹೇಗೆ ಹೆಚ್ಚು ಶೇಖರಿಸಲು ಸಾಧ್ಯವೊ ಹಾಗೆ ವಿಶಾಲವಾದ ಮನಸ್ಸು ಹೊಂದಿದವರಲ್ಲಿ ಧರ್ಮ ಬುದ್ಧಿ ಇರುತ್ತದೆ. ಅಂತಹವರಿಗೆ ದಾನ ನೀಡಬೇಕು ಎಂದರು.
ದಾನಗಳಲ್ಲಿ ಕನ್ಯಾದಾನ ಕೂಡ ಒಂದು ಮಗಳನ್ನು ಮದುವೆ ಮಾಡಿ ಕೊಡಬೇಕಾದಾಗ ಒಳ್ಳೆಯ ವರನನ್ನು ಆಯ್ಕೆ ಮಾಡಿ ಕನ್ಯಾದಾನ ಮಾಡುವಂತೆ ಸತ್ಪಾತ್ರರಿಗೆ ದಾನ ನೀಡಿದರೆ ಪುಣ್ಯ ಸಿಗುತ್ತದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೃಷ್ಣಪ್ಪ ದಾಸರು, ಗೋಷ್ಠಿಯ ಕಾರ್ಯದರ್ಶಿ ಮ ಸುರೇಶ್ ಬಾಬು, ಸಹ ಕಾರ್ಯದರ್ಶಿ ಸುಮಂತ್, ಅಕ್ಕನ ಬಳಗದ ವಿಮಲಾಂಬ ಅನಿಲ್ ಕುಮಾರ್, ಅಂಬಭವಾನಿ, ಮಹಾದೇವಮ್ಮ, ದಾಕ್ಷಾಯಿಣಮ್ಮ, ಮೀನ ಸುರೇಶ್ ಬಾಬು, ಬ್ರಮರಾಂಭಿಕ, ಹಾಗೂ ಅರಿವಿನ ಮನೆ ತಾಯಂದಿರು ಭಾಗವಹಿಸಿದ್ದರು