ಅದ್ಧೂರಿ ಕೋದಂಡರಾಮನ ಬ್ರಹ್ಮ ರಥೋತ್ಸವ
ಆನೇಕಲ್.ಮೇ.೭:ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ ಅಗ್ರಹಾರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಕೋದಂಡ ರಾಮ ಸ್ವಾಮಿಯ ಬ್ರಹ್ಮ ರಥೋತ್ಸವ ಗ್ರಾಮಸ್ಥರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ಇನ್ನು ಶ್ರೀ ಕೋದಂಡ ರಾಮ ಸ್ವಾಮಿಯ ಬ್ರಹ್ಮ ರಥೋತ್ಸವ ಅಂಗವಾಗಿ ವೀರಗಾಸೆ, ಬೊಂಬೆ ಕುಣಿತ, ತಮಟೆ ವಾದ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ವಿಶೇಷವಾಗಿ ಮಹಿಳೆಯರು ಮತ್ತು ಗ್ರಾಮಸ್ಥರಲ್ಲರೂ ಒಟ್ಟಿಗೆ ಕೈಯಿಂದ ರಥವನ್ನು ಎಳೆದ ದೃಶ್ಯ ಕಂಡು ಬಂತು, ಹಾಗೆಯೇ ದಾರಿಯುದ್ದಕ್ಕೂ ಅರವಂಟಿಕೆ ಮತ್ತು ಅನ್ನದಾಸೋಹ ಕುಟೀರಗಳನ್ನು ಆಯೋಜಿಸಲಾಗಿತ್ತು ಮತ್ತು ದೇವಾಲಯಕ್ಕೆ ಹಾಗೂ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಈ ವೇಳೆ ಜಯಪ್ರಕಾಶ್ ರವರು ಮಾತನಾಡಿ ನಗರೀಕರಣದ ಮಾಯಜಾಲಕ್ಕೆ ಹಳ್ಳಿಗಳೆಲ್ಲಾ ಪಟ್ಟಣಗಳಾಗಿ ಪರಿವರ್ತನೆ ಯಾಗುತ್ತಿದೆ ಜೊತೆಗೆ ನಾಡಿನ ಸಂಸ್ಕೃತಿ, ಜಾತ್ರೆಗಳು, ಹಬ್ಬಗಳು, ನಶಿಸಿ ಹೋಗುವ ಹಂತ ತಲುಪುತ್ತಿರುವುದನ್ನು ನಾವು ಕಾಣ ಬಹುದಾಗಿದ್ದು ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಜಾತ್ರೆಗಳು,
ಹಬ್ಬ ಅರಿದಿನಗಳನ್ನು ಮತ್ತು ನಾಡಿನ ಸಂಸ್ಕೃತಿಯನ್ನು ಜನರಿಗೆ ಮತ್ತು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಸೇರಿ ಶ್ರೀ ಕೋದಂಡ ರಾಮ ಸ್ವಾಮಿಯ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಕಾಡ ಅಗ್ರಹಾರ ಪಿಲ್ಲಾರೆಡ್ಡಿ, ಕೃಷ್ಣಾರೆಡ್ಡಿ, ಚಿನ್ನಯ್ಯ, ಸುರೇಶ್, ಭರತ್, ಗಿರೀಶ್, ವಿನೋದ್, ಮದು, ಮಂಜು ಮತ್ತು ವಿನಾಯಕ ಗೆಳೆಯರ ಬಳಗದವರು ಮತ್ತು ಕಾಡ ಅಗ್ರಹಾರ ಗ್ರಾಮಸ್ಥರು ಬಾಗವಹಿಸಿದ್ದರು.