ಜಿಲ್ಲೆಯ ಜನೆತೆಗ ಶಾಪವಾದ ಕೊಳಚೆ ನೀರು
ಚಿಕ್ಕಬಳ್ಳಾಪುರ.ಮೇ.೭- ಬರಪಿಡಿತ ಬಯಲು ಸೀಮೆಯ ಜಿಲ್ಲೆಗಳಲ್ಲಿ ಒಂದಾದ ಚಿಕ್ಕಬಳ್ಳಾಪುರ ಜಿಲ್ಲೆ ಅಂತರ್ಜಲ ಸಮಸ್ಯೆ ಹಾಗೂ ಕೆರೆಗಳಲ್ಲಿ ಕೊಳಚೆ ಬೆಳೆದು ಸಾಂಕ್ರಾಮಿಕ ರೋಗಗಳನ್ನು ಹರಡುವ ಕೇಂದ್ರವಾಗಿ ಪರಿಣಮಿಸಿರುವುದು ನಾಗರಿಕರಿಗೆ ಶಾಪವಾಗಿದೆ.
ಉದಾಹರಣೆ ಎಂಬಂತೆ ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆ ಹೆಚ್‌ಎನ್ ವಾಲಿ ನೀರು ಹರಿಯುವುದರಿಂದ ಹಾಗೂ ಕೆರೆಯ ತುಂಬಾ ಕೊಳಚೆ ಬೆಳೆದು ಈ ಕಂದವಾರ ಕೆರೆ ಆಗಿ ಪರಿಣಮಿಸಿರುವುದು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ.
ಈ ಕೆರೆಯ ನೀರನ್ನು ಸಾರ್ವಜನಿಕರು ವ್ಯವಸಾಯಕ್ಕಾಗಲಿ ಕುಡಿಯುವ ನೀರಿಗಾಗಲಿ ಬಳಕೆ ಮಾಡಿಕೊಳ್ಳಬಾರದು ಎಂದು ಸರ್ಕಾರದ ನಿರ್ವಹಣಾ ಇಲಾಖೆ ಬೋರ್ಡ್ ಹಾಕಿರುವುದು ಈ ಕರೆಯ ದುಸ್ಥಿತಿಗೆ ಹಿಡಿದಿರುವ ಕೈಗನ್ನಡಿಯಾಗಿದೆ.
ಹಿಂದೊಮ್ಮೆ ಈ ಕೆರೆಯ ಕೊಳಚೆ ನೀರಿನಲ್ಲಿ ಸಾವಿರಾರು ಮೀನುಗಳು ಸ್ವಚ್ಛ ನೀರಿಲ್ಲದ ಕಾರಣ ಮಾರಣ ಹೋಮ ಆಯಿತು.
ಅದೇ ರೀತಿ ಈ ಕೆರೆಯ ಸುತ್ತಮುತ್ತಲಿನ ಜನಕ್ಕೆ ಕರೆಯ ಕೊಳಚೆಯ ಮೇಲಿನ ಸೊಳ್ಳೆಗಳ ಕಾಟದಿಂದ ಮೈ ತುರಿಕೆ ಉಂಟಾಗಿದ್ದು ಉಂಟು.
ಈ ಕೊಳಚೆ ಪ್ರದೇಶದ ನೀರು ಬಹಳ ಆತಂಕಕಾರಿ ಆಗಿದೆ. ಈ ಕಾರಣದಿಂದ ಇಲ್ಲಿ ಅಘಾತಕಾರಿ ವಿಷಯ ಒಂದು ಬೆಳಕಿಗೆ ಬಂದಿದೆ. ಈ ಕೆರೆಯ ನೀರಿನಲ್ಲಿ ಮರಣಾಂತಿಕವಾದಂತಹ ಯುರೋನಿಯನ್ ಅಂಶ ಇರುವುದು ವರದಿಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟಗಾರರು ಆರೋಪಿಸಿ ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಇದು ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆಯ ಕಥೆಯಾಗಿದೆ.
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಅತಿ ಹೆಚ್ಚಿನ ಕೆರೆಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ. ಈ ಎರಡು ಜಿಲ್ಲೆಗಳಲ್ಲಿ ಒಟ್ಟು ೪೩೦೦ ಅಧಿಕ ಕೆರೆಗಳನ್ನು ಹೊಂದಿರುವ ಜಿಲ್ಲೆಗಳ ಆಗಿದ್ದು ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕುಗಳಾದ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಚೇಳೂರು ಗುಡಿಬಂಡೆ ಮಂಚೇನಹಳ್ಳಿ ಗೌರಿಬಿದನೂರು ಚಿಂತಾಮಣಿ ಶಿಡ್ಲಘಟ್ಟ ತಾಲೂಕುಗಳಲ್ಲಿ ೨೩೦೦ ಅಧಿಕ ಕೆರೆಗಳನ್ನು ಹೊಂದಿದೆ.
ಇಷ್ಟು ಅಗಾಧ ಪ್ರಮಾಣದಲ್ಲಿ ಕೆರೆಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗ ಅಂತರ್ಜಲ ಸಮಸ್ಯೆ ಹಾಗೂ ವರುಣನ ಅವಕೃಪೆ ಕಾರಣ ರಾಜಕಾಲಗಳ ಒತ್ತುವರಿ ಕೆರೆ ಅಂಗಳಗಳ ಒತ್ತುವರಿ ನೀರಿರುವ ಕೆರೆಗಳಲ್ಲಿ ಕೊಳಚೆ ತುಂಬಿರುವುದು ಹಲವು ಬಾರಿ ಮನವಿ ಸಲ್ಲಿಸಿ ಬೆಂಗಳೂರಿನ ಹೆಚ್ ಎನ್ ವ್ಯಾಲಿ ತ್ಯಾಜ್ಯ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಸುವ ಮುನ್ನ ಮೂರನೇ ಹಂತದ ಪರಿಷ್ಕರಣೆ ಮಾಡಬೇಕು ಎಂದು ಸಲ್ಲಿಸಿದ್ದ ಮನವಿ ಸರ್ಕಾರಿ ಕಚೇರಿಯಲ್ಲಿ ಧೂಳು ತಿನ್ನುತ್ತಿದೆ.
ಹಿಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ತಮ್ಮ ಬಜೆಟ್‌ನಲ್ಲಿ ಎಚ್‌ಎನ್ ವಾಲಿಗೆ ಮೂರನೇ ಹಂತದ ಪರಿಷ್ಕರಣೆಯ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು ಆದರೆ ಅದಕ್ಕೆ ಹಣಕಾಸು ಅನುದಾನ ಘೋಷಿಸಿರಲಿಲ್ಲ.
ಇದೀಗ ಕಂದವಾರ ಕೆರೆಯಲ್ಲಿ ಬಹಳಷ್ಟು ಬಹುಪಾಲು ಮುಕ್ಕಾಲು ಭಾಗವನ್ನು ಹರಡಿಕೊಂಡಿರುವ ಕೊಳಚೆಯನ್ನು ತೆಗೆಯಬೇಕು. ನೀರು ಶುದ್ದೀಕರಣಕ್ಕೆ ಕಾಯಕಲ್ಪ ನೀಡಬೇಕು ಇಲ್ಲವಾದಲ್ಲಿ ಕೆರೆಯ ಕೆಳಗಿನ ಪ್ರದೇಶದಲ್ಲಿ ವಾಸಿಸುವ ಜನರು ಅತ್ಯಧಿಕ ಸಂಖ್ಯೆಯಲ್ಲಿ ಮಾರಕ ರೋಗಕ್ಕೆ ತುತ್ತಾಗುವ ಅಪಾಯ ಇದೆ ಎಂಬುದು ನಾಗರಿಕರ ಒತ್ತಾಯವಾಗಿದೆ.
ಎತ್ತಿನಹೊಳೆ ಹೇಳಿಕೆಗೆ ಮಾತ್ರ ಸೀಮಿತ
ಬಯಲುಸುಮೆ ಜಿಲ್ಲೆಗಳಲ್ಲಿ ಅತಿ ಮುಖ್ಯವಾದ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಕೋಲಾರ ಜಿಲ್ಲೆಗಳಿಗೆ ಪರಿಶುದ್ಧವಾದ ನೀರನ್ನು ಹರಿಸುವ ನೀರಾವರಿ ಯೋಜನೆಗಳಾದ ಜಲತಜ್ಞ ಡಾಕ್ಟರ್ ಜಿ ಎಸ್ ಪರಮಶಿವಯ್ಯ ವರದಿ ಆಧಾರಿತ ಯೋಜನೆ ಯಾಗಲಿ ಪೂರ್ವ ಘಟ್ಟಗಳಲ್ಲಿ ಮಳೆಗಾಲದಲ್ಲಿ ಯಥೇಚ್ಛವಾಗಿ ಹರಿದು ಸಮುದ್ರ ಪಾಲಾಗುತ್ತಿದೆ. ನೀರಿನಲ್ಲಿ ೩೦ ಟಿಎಂಸಿ ಸರ್ವ ಯೋಜನೆಯಾಗಲಿ ಎತ್ತಿನಹೊಳೆ ನೀರಾವರಿ ಯೋಜನೆ ಯಾಗಲಿ ಅಥವಾ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಆಧಾರಿತ ಕೆಸಿ ವ್ಯಾಲಿ ಮತ್ತು ಎಚ್‌ಎನ್ ವ್ಯಾಲಿ ನೀರಿಗೆ ಮೂರನೇ ಹಂತದ ಪರಿಷ್ಕರಣ ಬೇಡಿಕೆಗಳನ್ನು ಒಳಗೊಂಡು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮತ್ತು ಅವರ ತಂಡದವರು ದಶಕಗಳ ಕಾಲದಿಂದ ನಿರಂತರ ಹೋರಾಟ ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯ ಪರಿಣಾಮವನ್ನು ಬೀರುತ್ತಿಲ್ಲ.ಇನ್ನು ಮಾಜಿ ಸಂಸದ ಡಾ. ಎಮ್ ವೀರಪ್ಪ ಮೊಯಿಲಿ, ಹೇಳಿಕೊಳ್ಳುತ್ತಿರುವ ಎತ್ತಿನಹೊಳೆ ನೀರು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಪತ್ರಿಕಾಗೋಷ್ಠಿಗಳಲ್ಲಿ ಇನ್ನು ಎರಡು ವರ್ಷಗಳಲ್ಲಿ ನೀರು ಬರುತ್ತದೆ ಎಂದು ಹೇಳಿ ಈಗಾಗಲೇ ೧೨ ವರ್ಷ ಆಗಿದೆ ಇನ್ನು ಯಾವಾಗ ನೀರು ಬರುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಸರ್ಕಾರ ಬಯಲು ಸೀಮೆ ಪ್ರದೇಶದ ಲಕ್ಷಾಂತರ ಜನರಿಗೆ ಅನುಕೂಲವಾಗುವ ನೀರಾವರಿ ಯೋಜನೆಯನ್ನು ಪೂರ್ಣಗೊಳಿದ್ದಲ್ಲಿ ಬಯಲು ಸೀಮೆ ಜಿಲ್ಲೆಯ ಲಕ್ಷಾಂತರ ಜನತೆಯ ಇಡಿ ಶಾಪಕ್ಕೆ ಒಳಗಾಗುವುದು ಅಂತಹ ದುಸ್ಥಿತಿ ಬರಬಾರದು ಎಂದರೆ ಸರ್ಕಾರ ತೀಕ್ಷ್ಣವಾಗಿ ಈ ಬಗ್ಗೆ ಗಮನ ಹರಿಸಬೇಕು ಎಂಬುದು ಈ ಚಿತ್ರ ವರದಿಯ ಉದ್ದೇಶವಾಗಿದೆ.