ನೇರ ನುಡಿಯಲ್ಲೇ ನಿಷ್ಟುರವಾದಿಯಾಗಿದ್ದ ಶ್ರೀನಿವಾಸ್ ಪ್ರಸಾದ್
ಸಂಜೆವಾಣಿ ನ್ಯೂಸ್
ಮೈಸೂರು.ಮೇ.07:- ಶ್ರೀನಿವಾಸ್ ಪ್ರಸಾದ್ ಯಾವುದೇ ಪಕ್ಷದಲ್ಲಿ ಇದ್ದರೂ ತಾನು ನಂಬಿದ ತತ್ವ ಸಿದ್ಧಾಂತಗಳಲ್ಲಿ ಎಂದು ರಾಜಿ ಮಾಡಿಕೊಳ್ಳದ ಅಪರೂಪದ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು, ಭೂಮಿ, ಮನಸ್ವಿನಿ ಅಂತಹ ಯೋಜನೆಗಳನ್ನು ಜಾರಿಗೆ ತಂದಿದೆ ನಮ್ಮ ಹೆಮ್ಮೆಯ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನಿಧನದಿಂದ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು
ನಗರದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಹಿರಿಯ ರಾಜಕಾರಣಿ ಸಂಸದರಾದ ವಿ ಶ್ರೀನಿವಾಸ್ ಪ್ರಸಾದ್ ಸಂತಾಪ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಅವರು ಅಪರೂಪದ ರಾಜಕಾರಣಿಯಲ್ಲಿ ಇವರು ಒಬ್ಬರು, ಇಂತಹ ವ್ಯಕ್ತಿತ್ವ ಸಿಗುವುದು ಬಹಳ ಅಪರೂಪದಲ್ಲಿ ಅಪರೂಪ, ಇವರು ಜಾತಿಗೆ ಸೀಮಿತ ರಲ್ಲ ಎಲ್ಲಾ ಜಾತಿಯ ರವರನ್ನು ಪ್ರೀತಿಸುತ್ತಾ ಎಲ್ಲಾ ಜಾತಿಯವರನ್ನು ಸಹ ಬೆಳೆಸಿದ್ದಾರೆ, ಇತರ ರಾಜಕಾರಣಿಗಳಿಗೆ ಪ್ರಸಾದ್ ರವರೇ ಮಾದರಿ ಎಂದು ಹೇಳಿದರು
ನಂತರ ಮಾತನಾಡಿದ ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ನಿಷ್ಕಳಂಕ ರಾಜಕಾರಣಿ, ಅಪ್ಪಟ ಹೋರಾಟಗಾರ, ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮೈಸೂರು ಭಾಗದಲ್ಲಿ ದೀನ ದಲಿತರ, ಬಡವರ ಆಶಾಕಿರಣವಾಗಿದ್ದ ಅವರು ತಮ್ಮ ರಾಜಕೀಯ ಜೀವ ನದುದ್ದಕ್ಕೂ ತುಳಿತಕ್ಕೊಳಗಾದವರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಮಾಜಿನಗರ ಪಾಲಿಕೆ ಸದಸ್ಯರಾದ ಸುನಿಲ್ , ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷರಾದ ನವೀನ್ ಕೆಂಪಿ, ಬ್ರಾಡ್ ವೇ ಕಿರಣ್, ವಿನಯ್ ಕಣಗಾಲ್, ಗೌರಿಶಂಕರ್ ನಗರದ ಶಿವು, ಪುರುಷೋತ್ತಮ್, ಅರಿವು ಸಂಸ್ಥೆ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಎಸ್ ಎನ್ ರಾಜೇಶ್, ವರುಣ ಮಹದೇವ್, ಚಕ್ರಪಾಣಿ, ಹಾಗೂ ಇನ್ನಿತರರು ಸಂತಪ್ಪ ಸಭೆಯಲ್ಲಿ ಭಾಗಿಯಾಗಿದ್ದರು