ಪೂರ್ಣಯ್ಯ ನಾಲೆ ತೆರವಿಗೆ ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.07:- ಮೈಸೂರಿನ ಪೂರ್ಣಯ್ಯ ನಾಲೆ ಅತಿಕ್ರಮವನ್ನು ತೆರವುಗೊಳಿಸುವಂತೆ ರಾಷ್ಟ್ರಕ್ರಾಂತಿ ಫೌಂಡೇಷನ್ ಅಧ್ಯಕ್ಷ ಜಿ.ಎಂ. ಮಹದೇವ ಒತ್ತಾಯಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಗಾದಿ ಗ್ರಾಮ, ಬಸವನಹಳ್ಳಿ, ದಾಸನಕೊಪ್ಪಲು, ರಟಿ ಕ್ಯಾತನಹಳ್ಳಿ, ಹಿನಕಲ್, ಮಾದಹಳ್ಳಿ, ಉಯಿಲಾಳು ಮೊದಲಾದ ಕಡೆಗಳಲ್ಲಿ ಪೂರ್ಣಯ್ಯ ನಾಲೆ ಅತಿಕ್ರಮಣವನ್ನು ಇದನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯ ನೀಡಿರುವ ಆದೇಶವನ್ನು ಸಂಬಂಧಿಸಿದವರು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಲೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿಕೊಂಡಿರುವವರಿಗೂ ತೆರವುಗೊಳಿಸುವಂತೆ ವಿವಿಧ ಹಂತಗಳಲ್ಲಿ ಆದೇಶಿಸಲಾಗಿದೆ. ಆದರೂ ಸಂಬಂಧಿಸಿದವರು ನ್ಯಾಯಾಲಯ ಆದೇಶ ಜಾರಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಡಿ. ಮಂಜುನಾಥ್, ಕುಮಾರಸ್ವಾಮಿ, ಕುಮಾರ್ ಉಪಸ್ಥಿತರಿದ್ದರು.