ಪಿ ಕೆ ನಾಗನೂರ ಗ್ರಾಮದಲ್ಲಿ ಮತ ಚಲಾಯಿಸಿದ ಶಾಸಕ ಲಕ್ಷ್ಮಣ ಸವದಿ
ಅಥಣಿ :ಮೇ.7: ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ
ಲಕ್ಷ್ಮಣ ಸವದಿ ಅವರು ಇಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಅವರ ಸ್ವಗ್ರಾಮ ಪಿ ಕೆ ನಾಗನೂರದಲ್ಲಿ ತಮ್ಮ ಸುಪುತ್ರ ಚಿದಾನಂದ
ಸವದಿಯವರೊಂದಿಗೆ ಸರತಿ ಸಾಲಿನಲ್ಲಿ ನಿಂತು ಭಾಗ ಸಂಖ್ಯೆ 204 ರಲ್ಲಿ ಮತ ಚಲಾವಣೆ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಸಂತೋಷದ ಹಾಗೂ ಸಂಭ್ರಮದ ವಿಷಯ.
ಮತದಾನದ ಹಕ್ಕನ್ನು ಚಲಾಯಿಸುವದು ನಮ್ಮೆಲ್ಲರ ಕರ್ತವ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಅವಕಾಶ ಮತದಾನದ ಹಕ್ಕನ್ನು ಎಲ್ಲರೂ ತಪ್ಪದೇ ಚಲಾಯಿಸಬೇಕು. ಇಂದು ನಾನು ಮತದಾನ ಮಾಡಿದ್ದೇನೆ ಸಂತೋಷ ಅನ್ನಿಸುತ್ತಿದೆ. ಪ್ರತಿಯೊಬ್ಬ ನಾಗರಿಕರು ಕೂಡ ಮತದಾನ ಮಾಡಿ ತಮ್ಮ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದ ಅವರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.