ಬರ, ಪ್ರಕೃತಿನಾಶದ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.07:- ಪ್ರಕೃತಿ ವಿಕೋಪದ ಬೆಳೆ ನಷ್ಟಕ್ಕೆ ವಿಶೇಷ ಪ್ಯಾಕೇಜ್, ಬರ ಪರಿಹಾರ ಮತ್ತು ಗೋಶಾಲೆ ಆರಂಭಿಸಲು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟಿಸಿದರು.
ಮೈಸೂರಿನ ಬಂಡಿಪಾಳ್ಯ ಹತ್ತಿರ ಮೈಸೂರು ಊಟಿ ಹೆದ್ದಾರಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ವಿರುದ್ಧ ಪೆÇೀಷಣೆಗಳನ್ನು ಕೂಗುತ್ತಾ ಹೆದ್ದಾರಿ ತಡೆ ಚಳುವಳಿ ನಡೆಸಲಾಯಿತು. ಪ್ರತಿಭಟನೆ ನೇತೃತ್ವವಹಿಸಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ತೀವ್ರ ಬರಗಾಲದಿಂದ ತತ್ತರಿಸಿದ್ದು, ಗಾಯದ ಮೇಲೆ ಬರೆ ಎಳೆದಂತೆ ಕಳೆದ ಎರಡು ದಿನಗಳಿಂದೇ ಭೀತರ ಸುಂಟರಗಾಳಿಯಿಂದ ಬಾಳೆ ಬೆಳಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಎರಡು ಜಿಲ್ಲೆಗಳಿಂದ ಸುಮಾರು ಒಂದುವರೆ ಸಾವಿರ ಹೆಕ್ಟಾರ್ ಪ್ರದೇಶವು ಬಾಳೆ ಬೆಳೆ ನಷ್ಟವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜನ್ನು ಘೋಷಿಸಿ ಬಾಳೆ ಬೆಳೆಗಾರರಿಗೆ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ತೀವ್ರ ಬರಗಾಲವಿದ್ದು ಜಾನುವಾರುಗಳಿಗೆ ಮೇವು ಸಿಗದೆ ತೊಂದರೆಯಾಗಿದೆ. ಮೇವು ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆದು ಯಾವುದೆ ಶರತ್ತು ಇಲ್ಲದೆ ಮೇವು ಪೂರೈಸಬೇಕು. ಗೋಶಾಲೆಗಳನ್ನು ತಕ್ಷಣ ಆರಂಭಿಸಲು ಒತ್ತಾಯಿಸಿದರು. ತೀವ್ರ ಬರಗಾಲದಿಂದ ನೊಂದಿರುವ ರೈತರಿಗೆ ಕಳೆದ ಸಾಲಿನ ಕಬ್ಬು ಬಾಕಿ ಪ್ರತಿ ಟನ್ನಿಗೆ 150 ರೂ.ನಂತೆ 25 ಕೋಟಿ ರೂ. ಹಾಗೂ 2023-24 ಸಾಲಿನ ಕಬ್ಬು ಹೆಚ್ಚುವರಿ ಲಾಭ ಅಂಶ ಕೊಡಿಸಬೇಕು ಎಂದರು.
ಇವೆ ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಹಾಡ್ಯ ರವಿ, ಜಿಲ್ಲಾ ಉಪಾಧ್ಯಕ್ಷ ಮುದ್ದಾಹಳ್ಳಿ ಚಿಕ್ಕ ಸ್ವಾಮಿ, ಹರ್ಷಕುಮಾರ್, ಮಲಿಯೂರು ಮಹೇಂದ್ರ ಕುಮಾರ್, ಬಸವರಾಜಪ್ಪ, ದೇವನೂರು ನಾಗೇಂದ್ರ ಸ್ವಾಮಿ, ಅಂಬಳೆ ಮಹದೇವಸ್ವಾಮಿ, ಊಡಿಗಾಲ ಮಂಜುನಾಥ್, ಕಲ್ಕುಂದ ರಾಹುಲ್, ಜನ್ನೂರ್ ಶಾಂತರಾಜು, ನಂದಿಗುಂದಪುರ ಎಂ.ಸೋಮಣ್ಣ, ಹಂಡುವಿನಹಳ್ಳಿ ಶಿವಣ್ಣ, ಕೆರೆಹುಂಡಿ ಶಿವಣ್ಣ, ಮುದ್ದಳ್ಳಿ ಕುಮಾರ್, ಎಚ್.ಗುಂಡ್ಲ ಶಂಕರ್ ಸುಕೇತ್ ರಾಜು, ಭೋಗಯ್ಯನ ಹುಂಡಿ ಮಹೇಶ್ ಮುಂತಾದವರು ಹಾಜರಿದ್ದರು.