ಜನಪದ ಕ್ಷೇತ್ರ ಉಳಿಸಿ,ಬೆಳೆಸಿ ಬಳಸಬೇಕಿದೆ-ಸವಿತಕ್ಕ
ಸಂಜೆವಾಣಿ ವಾರ್ತೆ
ಮಂಡ್ಯ.ಮೇ.7:- ಜನಪದ ಕ್ಷೇತ್ರ ಉಳಿಸಿ ಬೆಳೆಸಿ ಬಳಸಬೇಕಿದೆ ಎಂದು ರಂಗನಟಿ ಮತ್ತು ಜಾನಪದ ಗಾಯಕಿ ಸವಿತಕ್ಕ ಹೇಳಿದರು.
ನಗರದ ಪಿಇಎಸ್ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಮಂಡ್ಯ ಇವರು ಆಯೋಜಿಸಿದ್ದ ನಿತ್ಯ ಸಚಿವ ಕೆ.ವಿ. ಶಂಕರಗೌಡ ಅವರ 28ನೇ ವರ್ಷದ ಸ್ಮರಣಾರ್ಥ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಹೇಗೆ ಕನ್ನಡ ಭಾಷೆಯನ್ನು ಉಳಿಸಿ ಬಳಸಿ ಬೆಳೆಸುತ್ತಿದ್ದೆವೆಯೋ ಹಾಗೆ ಜಾನಪದವನ್ನು ಬಳಸಿ, ಉಳಿಸಿ, ಬೆಳೆಸಬೇಕಿದೆ, ಯುವಜನತೆ ಇಂತಹ ಸುಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು.
ಜಾನಪದ ಗೀತೆಗಳನ್ನು ಏಕಾಗ್ರತೆಯಿಂದ ಕಲಿಯಬೇಕು, ಇಷ್ಟಪಟ್ಟು ಕಷ್ಟಪಟ್ಟು ಗೀತೆಗಳ ಹಾಡುಗಾರಿಕೆಯನ್ನು ಕಲಿತು ಸಾಧನೆಯ ಹಾದಿ ತೊರಬೇಕು, ನಾವು ಜನಪದಗೀತೆ ಹಾಡಲು ಅಮೇರಿಕಾ, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಹೋಗಿದ್ಧೇನೆ, ಮುಂದಿಯೂ ಹೋಗುತ್ತಿರುತ್ತೇನೆ ಎಂದು ಹೇಳಿದರು.
ನಾವು ಜನಪದ ಗೀತೆ ಕಲಿತಿರುವುದರಿಂದ ನಮ್ಮನ್ನು ವೇದಿಕೆಗೆ ಆಹ್ವಾನಿಸುತ್ತಾರೆ, ಬಹಾಳ ಖುಷಿಯಾಗುತ್ತದೆ, ಮುಂದಿನ ಪೀಳೆಗೆ ಜನಪದ ಬೆಳೆಸಬೇಕಿದೆ, ನಾವೆಲ್ಲ ಮರೆಯಾಗುತ್ತೇವೆ, ಮುಂದಿನ ದಿನಗಳಲ್ಲಿ ಜನಪದ ಉಳಿದಿರಲು ನೀವು ವೇದಿಕೆಗಲ್ಲಿ ಜನಪದ ಹಾಡಬೇಕು ಎಂದು ತಿಳಿಸಿದರು.
ಬಳಿಕ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‍ಆನಂದ್ ಮಾತನಾಡಿ, ದೇಶಿಯ ಕಲೆ ಉಳಿಯಬೇಕಿದೆ, ವೇದಿಕೆಯಲ್ಲಿ ಇರುವ ಗ್ರಾಮೀಣ ಪ್ರತಿಭೆಗಳು ಜನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಇಂದು ರಾಷ್ಟ್ರ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಾಡುತ್ತಿದ್ದಾರೆ, ನೀವು ಬೆಳೆಯಿರಿ ಎಂದು ನುಡಿದರು.
ನಮ್ಮ ತಾತಾ ಕೆ.ವಿ.ಶಂಕರಗೌಡ ಅವರು ಕಲಾವಿದರಾಗಿದ್ದರು, ನಮ್ಮ ಜೀವನವೇ ನಾಟಕರಂಗವಾಗಿದೆ, ನಾಟಕದಲ್ಲಿ ಯಾವ ಪಾತ್ರವಯಿಸಿಕೊಳ್ಳಬೇಕು ಅಂತ ತಿಳಿತಿಲ್ಲ, ನಮ್ಮ ತಾತಾ ಮತ್ತು ಸಂಗಡಿಗರು ನಾಟಕ ಮಾಡಿ ಈ ಸಂಸ್ಥೆಯನ್ನು ಕಟ್ಟಿದ್ದಾರೆ ಎಂದು ಸ್ಮರಿಸಿದರು.
ಇದೇ ಸಂಧರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ ವಿಭಾಗದ ಸ್ಪರ್ಧಾರ್ಥಿಗಳು ಜಾನಪದಗೀತೆ ಸ್ಪರ್ಧೆಯಲ್ಲಿ ಹಲವು ಮಂದಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್, ರಾಷ್ಟ್ರೀಯ ಜನಪದ ಗಾಯಕ ರಮೇಶ್, ಆಕಾಶವಾಣಿ ಕಲಾವಿದ ಜಿ.ಜಿ.ನವೀನ್ ಕುಮಾರ್, ಉಪನ್ಯಾಸಕ ಎಸ್.ಪಿ.ಕ್ಯಾತೇಗೌಡ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ. ಜಿ.ಸವಿತಾ, ವಿದ್ಯಾರ್ಥಿ ಕ್ಷೇಮ ಸಮಿತಿ ಸಂಚಾಲಕ ಪೆÇ್ರ.ವೀರೇಶ್, ಪೆÇ್ರ.ನಂದೀಶ್ ಸೇರಿದಂತೆ ಹಲವರು ಇದ್ದರು