ಮೊದಲ ಬಾರಿಗೆ ಮತ ಚಲಾಯಿಸಿದ್ದು ಖುಷಿ ನೀಡಿದೆ: ಶ್ರೀರಕ್ಷಾ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.7:ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಮುದ್ದೇಬಿಹಾಳ ಮತ ಕ್ಷೇತ್ರದ ಬೂತ್ ಸಂಖ್ಯೆ 127ರಲ್ಲಿ ಯುವ ಮತದಾರಳಾದ ಶೀರಕ್ಷಾ ಘಾಟಗಿ ಅವರು ಪ್ರಪ್ರಥಮ ಬಾರಿಗೆ ಮತ ಚಲಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಕ್ಷಾ ಅವರು, ನಾನು ಪ್ರಥಮ ಬಾರಿ ಮತ ಚಲಾಯಿಸಿದ್ದು ತುಂಬಾ ಖುಷಿಯಾಗಿದೆ. ಸರಕಾರ ರಚನೆ ಮಾಡುವಲ್ಲಿ ನನ್ನ ಪಾತ್ರವೂ ಇದೆ ಎಂಬುವುದು ನನಗೆ ಹೆಮ್ಜೆಯಾಗಿದೆ. ಎಲ್ಲ ಯುವಕ, ಯುವತಿಯರು ತಪ್ಪದೇ ಮತ ಹಾಕುವಂತೆ ಮನವಿ ಮಾಡಿಕೊಂಡರು.