ಭಕ್ತರ ಜಯ ಘೋಷಗಳ ಮಧ್ಯೆ ಜರುಗಿದ ನಗನೂರ ಶ್ರೀ ಶರಣಬಸವೇಶ್ವರರ ರಥೋತ್ಸವ
ಕೆಂಭಾವಿ:ಮೇ 6:ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಶುಕ್ರವಾರ ಇತಿಹಾಸ ಪ್ರಸಿದ್ಧ ಸಾಲೋಕ್ಯ ವಂಶದ ಮಹಾದಾಸೋಹಿ ಶರಣಬಸವೇಶ್ವರರ ೧೭೭ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವವು ಭಕ್ತರ ಜಯ ಘೋಷಗಳ ಮಧ್ಯೆ ಸಂಜೆ ಉತ್ಸಾಹದಿಂದ ನೆರವೇರಿತು.
ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣರ ನೇತೃತ್ವದಲ್ಲಿ ಸಂಪ್ರದಾಯದAತೆ ಮುಂಜಾನೆಯಿAದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿ ಸಾಯಂಕಾಲದವರೆಗೆ ಅನೇಕ ಚಟುವಟಿಕೆಗಳು ನಡೆದವು. ಸಂಜೆ ೬:೪೫ಕ್ಕೆ ಶೃಂಗಾರಗೊAಡಿದ್ದ ರಥದಲ್ಲಿ ಶರಣಬಸವೇಶ್ವರರ ಮೂರ್ತಿಯನ್ನಿಟ್ಟು ಮೇಲೆ ಶಿಖರ ಏರುತ್ತಿದ್ದಂತೆ ಭಕ್ತರ ಜಯಕಾರ ಮುಗಿಲು ಮುಟ್ಟಿತು.
ಪೀಠಾಧಿಪತಿ ಶರಣಪ್ಪ ಶರಣರು ರಥೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳು, ವೃದ್ಧರು, ಮಹಿಳೆಯರು ಹೊಸ ಬಟ್ಟೆಗಳನ್ನುಟ್ಟು ಶರಣಬಸವೇಶ್ವರರ ಪ್ರಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಯಿAದಲೆ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ಕಣ್ತುಂಬಿಕೊAಡರು.
ರಾಸುಗಳ ಜಾತ್ರೆಗೆ ಚಾಲನೆ
ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬೃಹತ್ ರಾಸುಗಳ ಸಂತೆಗೆ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣರು ಚಾಲನೆ ನೀಡಿದರು. ಪ್ರಾಚೀನ ಇತಿಹಾಸವಿರುವ ಈ ದನಗಳ ಸಂತೆಗೆ ಕರ್ನಾಟಕ ಮಾತ್ರವಲ್ಲದೆ ಅನೇಕ ರಾಜ್ಯದ ವಿವಿಧ ರೀತಿಯ ತಳಿಗಳ ರಾಸುಗಳು ಇಲ್ಲಿ ಮಾರಲ್ಪಡುತ್ತದೆ. ಹತ್ತು ದಿನಗಳು ನಡೆಯುವ ಈ ದನದ ಸಂತೆ ರೈತರ ಮನದ ಬಯಕೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.