1.40 ಲಕ್ಷ ಮೌಲ್ಯದ ಅಕ್ರಮ ಮದ್ಯ ಜಪ್ತಿ
ಹುಲಸೂರ,ಮೇ 6: ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತಿದ್ದ ವಾಹನದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ, 1.40 ಲಕ್ಷ ರೂ. ಮೌಲ್ಯದ ಮದ್ಯದ ಬಾಟಲ್‍ಗಳನ್ನು ಜಪ್ತಿ ಮಾಡಿಕೊಂಡ ಘಟನೆ ಬಸವ ಕಲ್ಯಾಣ ತಾಲೂಕಿನ ಹುಲಸೂರ ಪಟ್ಟಣದ ಸಮೀಪ ಜರುಗಿದೆ.
ಅಬಕಾರಿ ಇಲಾಖೆಯ ಬೀದರನ ಉಪ ಅಧೀಕ್ಷಕ ರವಿ ಮುರಗುಡ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಬಸವಕಲ್ಯಾಣ ನಗರದ ನಿವಾಸಿ ಮಲ್ಲಿಕಾರ್ಜುನ ಕಂಟೆಪ್ಪ ಎಂಬಾತನನ್ನು ಬಂಧಿಸಲಾಗಿದೆ.