20.98 ಲಕ್ಷ ಜನರಿಗೆ ಮತದಾನದ ಹಕ್ಕುಕಲಬುರಗಿ ಲೋಕಸಭಾ ಕ್ಷೇತ್ರ : ನಾಳೆಯ ಮತದಾನಕ್ಕೆ ಸಕಲ ಸಿದ್ಧತೆ
ಕಲಬುರಗಿ,ಮೇ.6: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ನಾಳೆ ( ಮೇ 7) ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆ ವರೆಗೂ ಮತದಾನ ನಡೆಯಲಿದೆ.ಚುನಾವಣೆಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ.
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದಾರೆ.18-19 ವರ್ಷದ 36,543 ಯುವ ಮತದಾರರಿದ್ದಾರೆ. ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ªರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಈಗಾಗಲೆ ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದಾರೆ.ಕ್ಷೇತ್ರದಾದ್ಯಂತ ಮುಕ್ತ, ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲಾ ಪೂರ್ವಸಿದ್ಧತೆ ಕೈಗೊಂಡಿದ್ದು, ಕೇಂದ್ರದ ಪೆÇಲೀಸ್ ಪಡೆ ಭದ್ರತೆಗೆ ಈಗಾಗಲೆ ಆಗಮಿಸಿದೆ.
ಕ್ಷೇತ್ರದಾದ್ಯಂತ ನಗರ ಪ್ರದೇಶದಲ್ಲಿ 672 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,494 ಸೇರಿ ಒಟ್ಟು 2,166 ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಇರಲಿದೆ. ಇದರಲ್ಲಿ 493 ಮತಗಟ್ಟೆ ವಲನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಿದ್ದು, ಇಂತಹ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ 9 ಕ್ಷೇತ್ರಕ್ಕೆ ಒಟ್ಟು 270 ಜನ ಮೈಕ್ರೋ ವೀಕ್ಷಕರನ್ನು ಸಹ ನೇಮಿಸಲಾಗಿದೆ. ಮತದಾನ ದಿನದಂದು ಚುನಾವಣಾ ಕೆಲಸದಲ್ಲಿನ ಅಧಿಕಾರಿಗಳು ಹೊರತುಪಡಿಸಿ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತದಾರರು ಮೊಬೈಲ್ ತೆಗೆದುಕೊಂಡು ಬರುವಂತಿಲ್ಲ
ಜಿಲ್ಲೆಯಲ್ಲಿ 2378 ಮತಗಟ್ಟೆ:
ಜಿಲ್ಲೆಯಲ್ಲಿ 2378 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಓರ್ವ ಪಿ.ಆರ್.ಓ, ಓರ್ವ ಎ.ಪಿ.ಆರ್.ಓ, ಇಬ್ಬರು ಪೆÇಲಿಂಗ್ ಆಫೀಸರ್ ಇರಲಿದ್ದಾರೆ. ಇದರ ಹೊರತಾಗಿ ಓರ್ವ ಗ್ರೂಪ್ ಡಿ. ಸಿಬ್ಬಂದಿ ಮತ್ತು ಓರ್ವ ಪೆÇಲೀಸ್ ಪೇದೆ ಇರಲಿದ್ದಾರೆ.
2378 ಮತಗಟ್ಟೆಗೆ ಶೇ.20 ರಷ್ಟು ಹೆಚ್ಚುವರಿ ಸಿಬ್ಬಂದಿ ಸೇರಿ ಪಿ ಆರ್ ಒ -2849,ಎಪಿಆರ್‍ಒ -2849, ಪೆÇಲಿಂಗ್ ಸ್ಟಾಫ್-5698 ಸೇರಿ ಒಟ್ಟು 11,396 ಚುನಾವಣಾ ಸಿಬ್ಬಂದಿಗಳನ್ನು ನಾಳಿನ ಮತದಾನಕ್ಕೆ ನಿಯೋಜಿಸಿದೆ. ಇದರಲ್ಲಿ ಮಹಿಳಾ ಸಖಿ ಮತಗಟ್ಟೆಗೆ 180 ಸಿಬ್ಬಂದಿ ಇದ್ದಾರೆ.
ಬಿಸಿಲು ತಾಪ,ಆರೋಗ್ಯ ಕಾಳಜಿ:
ಬಿಸಿಲಿನ ತಾಪ ಹೆಚ್ಚಿರುವ ಕಾರಣ ಪ್ರತಿ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾರರ ಆರೋಗ್ಯ ಕಾಳಜಿ ಬಗ್ಗೆ ವಿಶೇಷವಾಗಿ ಗಮನ ವಹಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಓ.ಆರ್.ಎಸ್., ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಚಿಕಿತ್ಸಾ ಕಿಟ್ ಇಡಲಾಗಿದ್ದು, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿರಲಿದ್ದಾರೆ. ನೆರಳಿಗೆ ಶಾಮಿಯಾನ ವ್ಯವಸ್ಥೆ, ವೇಟಿಂಗ್ ರೂಂ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಅರ್ಧ ಗಂಟೆಯಲ್ಲಿ ಅಂಬುಲೆನ್ಸ್ ದೊರೆಯುವಂತೆ ಜಿಲ್ಲೆಯಾದ್ಯಂತ 66 ಅಂಬುಲೆನ್ಸ್ ಗುರುತಿಸಲಾಗಿದ್ದು, ವಾಹನ ಚಾಲಕರ ಮೊಬೈಲ್ ಸಂಖ್ಯೆ ಪಿ.ಆರ್.ಓ.ಗಳಿಗೆ ನೀಡಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ-2, ಸಿ.ಹೆಚ್.ಸಿ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ-2 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆ ಬಿಸಲಿನ ತಾಪ ಹಿನ್ನಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮೀಸಲಿರಿಸಿದ್ದು, ಇಲ್ಲಿ 24 ಗಂಟೆ ವೈದ್ಯರು ಇರಲಿದ್ದಾರೆ
ಸಖಿ, ಥೀಮ್ ಬೂತ್‍ಗಳು:
ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಜಿಲ್ಲೆಯಾದ್ಯಂತ ಸಖಿ, ಥೀಮ್, ಯುವ ಹಾಗೂ ವಿಶೇಷಚೇತನರನ್ನು ಗುರಿಯಾಗಿಸಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಕಲಬುರಗಿ ಜಿಲ್ಲೆಯಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಬೂತ್, ತಲಾ ಒಂದು ಯುವ, ಪಿ.ಡಬ್ಲ್ಯೂ.ಡಿ. ಹಾಗೂ ಥೀಮ್ ಬೇಸ್ಡ್ ಬೂತ್ ಸ್ಥಾಪಿಸಲಾಗುತ್ತಿದೆ. ಅದರಂತೆ ಒಟ್ಟಾರೆ 45 ಸಖಿ ಪಿಂಕ್ ಬೂತ್, ತಲಾ 9 ಯುವ, ಥೀಮ್ ಹಾಗೂ ಪಿ.ಡಬ್ಲ್ಯೂ.ಡಿ. ಸೇರಿ ಒಟ್ಟಾರೆ 72 ಬೂತ್ ಮತದಾರರ ಸ್ನೇಹಿಯಾಗಿ ಸಿದ್ಧಗೊಳಿಸಲಾಗುತ್ತಿದೆ.
ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ:
ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಂಪ್ (ಇಳಿಜಾರು) ರೈಲಿಂಗ್, ಗಾಲಿ ಕುರ್ಚಿಗಳು, ಅಂಧ ಮತದಾರರಿಗೆ ಅಗತ್ಯವಿರುವಂತೆ ಮತಯಂತ್ರದಲ್ಲಿ ಬೈಲ್ ಲಿಪಿ ಸಂಖ್ಯೆಗಳು, ಬೈಲ್ ಲಿಪಿಯ ಡಮ್ಮಿ ಮತಪತ್ರ, ಬೂತಕನ್ನಡಿ, ಸಂಜ್ಞಾ ಭಾಷಾ ತಜ್ಞರ ನೆರವು, ಸೂಚನಾ ಫಲಕಗಳು, ಶೌಚಾಲಯದ ವ್ಯವಸ್ಥೆ, ಪ್ರತ್ಯೇಕ ಸರಥಿ ಸಾಲು, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಆರೋಗ್ಯ ಸಹಾಯಕರ ನೆರವು, ಉಚಿತ ಸಾರಿಗೆ ವ್ಯವಸ್ಥೆ ಹಾಗೂ ತರಬೇತಿ ಪಡೆದ ಸ್ವಯಂ ಸೇವಕರು ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.
ಇಂದು,ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯ:
ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಸಿಬ್ಬಂದಿಗಳನ್ನು ಕರೆದೊಯ್ಯಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 ರಿಂದ ಒಟ್ಟು 127 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಿದ್ದರಿಂದ ಮೇ 6 ಹಾಗೂ 7 ರಂದು ಬಸ್ ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಕಲಬುರಗಿ, ಕಮಲಾಪುರ, ಸೇಡಂ, ಮುಧೋಳ, ಚಿತ್ತಾಪುರ, ಕಾಳಗಿ, ಚಿಂಚೋಳಿ, ಶಹಾಬಾದ ಹಾಗೂ ಕಲಬುರಗಿ ನಗರ ಸಾರಿಗೆ (ಸುಪರ್ ಮಾರ್ಕೇಟ್) ಬಸ್ ನಿಲ್ದಾಣಗಳಿಂದ ವಿವಿಧಡೆ ತೆರಳುವ ದೈನಂದಿನ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಗುಲಬರ್ಗಾ ವಿ.ವಿ.ಯಲ್ಲಿ ಮತ ಎಣಿಕೆ :
ಲೋಕಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಿದೆ. ಈಗಾಗಲೆ ಪಿ.ಆರ್.ಓ, ಎ.ಪಿ.ಆರ್.ಓ. ಗಳಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಮತದಾನ ಮುಕ್ತಾಯದ ನಂತರ ಡಿ-ಮಸ್ಟರಿಂಗ್ ಸೆಂಟರ್ ಮೂಲಕ ಗುಲಬರ್ಗಾ ವಿ.ವಿ.ಯ ವಿವಿಧ ವಿಭಾಗದಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್ ರೂಂಗಳಿಗೆ ಸೂಕ್ತ ಭದ್ರತೆಯಲ್ಲಿ ಮತಯಂತ್ರ ತಂದು ಸೀಲ್ ಮಾಡಲಾಗುತ್ತದೆ. ಇಲ್ಲಿಯೇ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ