ಸಡಗರ ಸಂಭ್ರಮದಿಂದ ಜರುಗಿದ ಕೊತ್ತಲ ಬಸವೇಶ್ವರ ರಥೋತ್ಸವ
ಸೇಡಂ,ಮೇ,06: ಪಟ್ಟಣದಲ್ಲಿರುವ ಆರಾಧ್ಯ ದೈವ ಕೋಟೆ ಕೊತ್ತಲ ಬಸವೇಶ್ವರರ ದೇವಾಲಯದ ರಥೋತ್ಸವ ಸಂಜೆ ಸಡಗರ ಸಂಭ್ರಮದಿಂದ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಪೀಠಾಧಿಪತಿ ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ರವರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ವರ್ಷದಂತೆ ಈ ವರ್ಷವೂ ಭೋವಿ ಸಮಾಜದ ಮುಖಂಡರು ರಥೋತ್ಸವ ಚಲಾಯಿಸುವುದಕ್ಕೆ ಸಾಕ್ಷಿಯಾದರೂ.ಅಗ್ಗಿ ಕಟ್ಟದವರೆಗೆ ತಲುಪಿದ ನಂತರ ಪೂಜೆ ಸಲ್ಲಿಸಿದ ಬಳಿಕ ತೇರು ಇರುವ ಸ್ಥಳಕ್ಕೆ ಬಂದು ತಲುಪಿತ್ತು.
ಸಾವಿರಾರು ಭಕ್ತರು ರಥೋತ್ಸವಕ್ಕೆ ಉತ್ತತ್ತಿ,ಬಾದಾಮಿ,
ಎಸೆದು ಭಕ್ತಿ ಸಮರ್ಪಿಸಿದರು.ಈ ವೇಳೆಯಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಪಾಟೀಲ್ ಊಡಗಿ, ಶಿವಕುಮಾರ್ ಪಾಟೀಲ್ ತೇಲ್ಕೂರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್, ಸಹಾಯಕ ಉಪ ವಿಭಾಗಾಧಿಕಾರಿ ಆಶಪ್ಪ ಪೂಜಾರಿ, ತಹಶೀಲ್ದಾರ್ ಶಿವಾನಂದ ಮೇತ್ರೆ, ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಅಪಾರಭಕ್ತರು ಪಾಲ್ಗೊಂಡಿದರು.