ಕನ್ನಡ ಕಟ್ಟಾಳು ಮಹನೀಯರು ಪ್ರಾತ: ಸ್ಮರಣೀಯರು: ಭಾರತಿ ಪಾಟೀಲ
ವಿಜಯಪುರ,ಮೇ.6 : ಕನ್ನಡ ಸಾಹಿತ್ಯ ಪರಿಷತ್ತಿಗೆ 110 ರ ಸಂಭ್ರಮ. ಕನ್ನಡ ನಾಡು ನುಡಿ, ಸಂಸ್ಕøತಿಯ ರಕ್ಷಣೆಗಾಗಿ 1915 ಮೈಸೂರಿನ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ತು ಸಂಸ್ಥಾಪನೆಗೊಳ್ಳಲು ಕಾರಣರಾಗಿದ್ದರು ಎಂದು ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಲ್ಲ ತಾಲೂಕ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 110 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಉದ್ಘಾಟಿಸಿ ಮಾತನಾಡಿದರು.
ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು ನುಡಿಯ ಬೆಳವಣಿಗೆಗೆ ನೆರವಾಗಿದ್ಡಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ವ್ಹಿ.ಡಿ. ಐಹೊಳ್ಳಿ, ಕಲೆ, ಸಾಹಿತ್ಯ .ಸಂಗೀತ ಹಾಗೂ ನಾಟಕಗಳಿಂದ ಇಂದು ಕನ್ನಡ ಭಾμÉ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಅಭಿಮಾನದ ಕನ್ನಡ ಭಾμÉಯನ್ನು ಇಂದು ನಾವೆಲ್ಲರೂ ಅಪ್ಪಿ ಒಪ್ಪಿಕೊಳ್ಳಬೇಕಾಗಿದೆ ಎಂದರು.
ಗುಣದಾಳ ಕಲ್ಯಾಣಮಠ ವಿವೇಕಾನಂದ ಸ್ವಾಮಿಜಿ ಆಶೀರ್ವಚನ ನೀಡಿ, ಕನ್ನಡ ತಾಯಿ ಭಾμÉ, ಮಾತೃ ಭಾμÉ. ಆಡಳಿತ ಭಾμÉಯಾಗಿದೆ. ಹೃದಯದಿಂದ ಅಭಿಮಾನ ಪೂರ್ವಕವಾಗಿ ಭಾμÉಯನ್ನು ಶ್ರೀಮಂತಗೊಳಿಸುವ ಕಾರ್ಯವಾಗಬೇಕು ಎಂದರು.
ರಾಜ್ಯ ಕರವೇ ಉಪಾಧ್ಯಕ್ಷÀ ಎಮ್.ಸಿ. ಮುಲ್ಲಾ ಮಾತನಾಡಿ, ಕನ್ನಡ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತೇವೆ. ಕನ್ನಡ ಅನ್ನದ ಭಾμÉಯಾಗಿ ಉಳಿಸಿಕೊಳ್ಳಬೇಕೆಂದರು.
ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಆನಂದ ಕುಲಕರ್ಣಿ ಮಾತನಾಡಿ, ನಿಜವಾದ ಕನ್ನಡಿಗರು ಸಾಹಿತ್ಯ ಪರಿಷತ್ತಿನ ಸಕ್ರಿಯ ಸದಸ್ಯರಾಗುವದರ ಮೂಲಕ ತಾಯಿ ಭುವನೇಶ್ವರಿಯ ಸೇವೆ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ಇಂಡಿ ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ. ಆಲಮೇಲ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ. ತಿಕೋಟಾ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿದರು.
ನಗರ ಘಟಕ ಕಸಾಪ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ ಸಂಸ್ಥಾಪನಾ ದಿನ ಕುರಿತು ಕವನ ವಾಚಿಸಿದರು. ತಾಳಿಕೋಟೆ ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ, ನಿಡಗುಂದಿ ಕಸಾಪ ಅಧ್ಯಕ್ಷ ಸಂಗಮೇಶ ಕೆಂಭಾವಿ, ಬಸವನ ಬಾಗೇವಾಡಿ ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ. ಚಡಚಣ ಕಸಾಪ ಅಧ್ಯಕ್ಷ ಸಿದ್ದಪ್ಪ ಮಾನೆ. ಸಿಂದಗಿ ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಮನಗೂಳಿ ಹೋಬಳಿ ಅಧ್ಯಕ್ಷ ಎಸ್.ಆಯ್. ಬಿರಾದಾರ ವೇದಿಕೆಯ ಮೇಲಿದ್ದರು.
ಸೂಫಿಯಾ ಬಿಜಾಪುರ, ಅಧಿತಿ ಮೊಕಾಶಿ, ಭಾಗ್ಯ ಕನ್ನಡದ ಗೀತೆಗಳನ್ನು ಹಾಡಿದರು. ಶ್ರೀಕಾಂತ ಮಾದರ ಸ್ವಾಗತಿಸಿ ಗೌರವಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಲಕ್ಷ್ಮಿ ಕಾತ್ರಾಳ ವಂದಿಸಿದರು.
ಹಾಸಿಂಪೀರ ವಾಲಿಕಾರ, ಬಸವರಾಜ ಆಜೂರ, ಸುಖದೇವಿ ಅಲಬಾಳಮಠ, ಕಮಲಾ ಮುರಾಳ, ಶಾರದಾ ಐಹೊಳ್ಳಿ, ಜಿ.ಎಸ್. ಬಳ್ಳೂರ .ಲತಾ ಗುಂಡಿ, ಗಂಗಮ್ಮ ರಡ್ಡಿ, ರಾಜೇಸಾಬ ಶಿವನಗುತ್ತಿ, ನಿಂಗಪ್ಪ ಬೊಮ್ಮನಹಳ್ಳಿ, ಲಕ್ಷೀ ಬಿರಾದಾರ, ಸಿದ್ರಾಮಪ್ಪ ಜಂಗಮಶೆಟ್ಟಿ, ಆನಂದ ಮೊಕಾಶಿ, ಸಿದ್ದು ಸಾವಳಸಂಗ, ಸಲೀಮ ಮುಲ್ಲಾ, ಮಂಜುನಾಥ ಮಾನೆ, ಕೆ.ಎಸ್. ಹಣಮಾನೆ, ಸುರೇಶ ಕಾಗಲಕರರಡ್ಡಿ, ಕೊಟ್ರೇಶ ಹೆಗಡಿಹಾಳ, ಅಹಮ್ಮದ ವಾಲಿಕಾರ, ಬಿ.ಆಯ್. ಸಿಂಧೆ, ಎಮ್.ಎನ್. ನಿಂಬಾಳ, ಶ್ರೀಶೈಲ ಬಿಳೆಬಾವಿ, ಆರ್.ಬಿ. ದಾನಿ, ಶಿವಾಜಿ ಮೋರೆ ಮುಂತಾದವರು ಉಪಸ್ಥಿತರಿದ್ದರು.