ಸಾಲಬಾಧೆ :ವ್ಯಕ್ತಿ ಆತ್ಮಹತ್ಯೆ
ಚಿಟಗುಪ್ಪ:ಮೇ.6:ಕೃಷಿಗಾಗಿ ತನ್ನ ತಂದೆ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ ಮತ್ತು ಖಾಸಗಿಯಾಗಿ ಮಾಡಿದ ಸಾಲ ತೀರಿಸಲಾಗದೆ ವ್ಯಕ್ತಿ ಒಬ್ಬ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಡಬಾಳ್ ಗ್ರಾಮದ ಶಿವಾರದಲ್ಲಿ ದಿನಾಂಕ 2 ರಂದು ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಮುಸ್ತರಿ ವಾಡಿ ಗ್ರಾಮದ ಸಂತೋಷ್(32) ತಿಪ್ಪಣ್ಣ ಎನ್ನುವ ವ್ಯಕ್ತಿ ತನ್ನ ಹೊಲದ ಕಟ್ಟೆಯ ಗಿಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ವಿವಿಧ ಬ್ಯಾಂಕ್ ಮತ್ತು ಖಾಸಗಿಯಾಗಿ ಸುಮಾರು 3 ಲಕ್ಷ ರೂಪಾಯಿ ಸಾಲ ತನ್ನ ತಂದೆ ಹೆಸರಿನಲ್ಲಿದ್ದ ಕಾರಣ ಹಾಗೂ ಬೆಳೆ ಕೈ ಕೊಟ್ಟಿದ್ದರಿಂದ ಖಿನ್ನನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಕುರಿತು ಚಿಟಗುಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.