ಸಮಗ್ರ ಶಿಕ್ಷಕರ ತರಬೇತಿ ಮತ್ತು ಸಬಲೀಕರಣ ಕಾರ್ಯಕ್ರಮ
ವಿಜಯಪುರ,ಮೇ.6:ಆಯ್ದಕ್ಕಿ ಲಕ್ಕಮ್ಮ ಪ್ರತಿಷ್ಠಾನ ಹಾಗೂ ಸ್ವಯಂ ಪ್ರಿಸ್ಕೂಲ್ ಸಂಯೋಗದಲ್ಲಿ ಸಮಗ್ರ ಶಿಕ್ಷಕರ ತರಬೇತಿ ಮತ್ತು ಸಬಲೀಕರಣ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಶ್ರೀದೇವಿ ಮಿಣಜಗಿ ಅವರು ಶಿಕ್ಷಕರಿಗೆ ಪೆÇ್ರೀತ್ಸಾಹದ ಆಶಯ ನುಡಿ ಹೇಳಿದರು. ಕಾರ್ಯಗಾರವನ್ನು ಅಕ್ಷರ ದಾಸೋಹಿ ಪುರಸ್ಕøತರಾದ ಹಾಗೂ ಶಿಕ್ಷಕರ ಕೌಶಲ್ಯಗಳ ತರಬೇತಿದಾರರಾದ ರಾಜೇಶ್ವರಿ ಚಿಕ್ಕೋಡಿ ಅವರು ನಡೆಸಿಕೊಟ್ಟರು. ಈ ಕಾರ್ಯಾಗಾರದಲ್ಲಿ ಆಧುನಿಕ ಶೈಕ್ಷಣಿಕ ಸವಾಲುಗಳು ಹಾಗೂ ಪರಿಹಾರ ಕೌಶಲ್ಯಗಳನ್ನು ವಿವಿಧ ರೀತಿಯ ಚಟುವಟಿಕೆಗಳ ಮೂಲಕ ವಿವರಿಸಲಾಯಿತು. ಪ್ರಸ್ತುತ ಕಾರ್ಯಗಾರದಲ್ಲಿ ಆಸಂಗಿಯ ಶ್ರೀ ಬಾಹುಬಲೇಶ್ವರ ಶಿಕ್ಷಣ ಸಂಸ್ಥೆಯ ಹಂಸವೇಣಿ ಶಾಲೆಯ ಶಿಕ್ಷಕಿಯರು ಹಾಗೂ ಸ್ವಯಂ ಪ್ರಿ ಸ್ಕೂಲ್, ವಿಜಯಪುರದ ಶಿಕ್ಷಕಿಯರು ಆಸಕ್ತಿದಾಯಕವಾಗಿ ಪಾಲ್ಗೊಂಡು ಎಲ್ಲಾ ರೀತಿಯ ಬೋಧನಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವುದರೊಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.