ಮದುವಣಗಿತ್ತಿಯಂತೆ ಶೃಂಗಾರಗೊಂಡ ಮತಗಟ್ಟೆ ಕೇಂದ್ರಗಳು
ಸೇಡಂ, ಮೇ, 06: ನಾಳೆ ಎರಡನೇ ಹಂತದ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಸೇಡಂ ವಿಧಾನಸಭೆ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ 4 ಪಟ್ಟಣದಲ್ಲಿ 3 ಗ್ರಾಮಾಂತರದಲ್ಲಿ ಒಟ್ಟು 07 ಮತಗಟ್ಟೆಗಳು ಮದುವಣಗಿತ್ತಿಯಂತೆ ಮತದಾನದ ಕೇಂದ್ರಗಳು ಶೃಂಗಾರಗೊಂಡಿದು ಮತದಾರರನ್ನು ಕೈಬೀಸಿ ಕರೆಯುವಂತೆ ತಾಲೂಕ ಸ್ವೀಪ್ ಸಮಿತಿ ವತಿಯಿಂದ ಮಾಡಲಾಗಿದೆ.