ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ಚಿಟಗುಪ್ಪಾ :ಮೇ.6:ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶ್ವ ಭಾರತಿ ಪ್ರೌಢಶಾಲೆ ಕೊಡಂಬಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕರಬಸಪ್ಪ ಕಟಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ 2000 ವರ್ಷಕ್ಕಿಂತ ಅಧಿಕ ಇತಿಹಾಸವಿರುವ ನಮ್ಮ ಕನ್ನಡ ಸಮೃದ್ಧ ಭಾಷೆ ಆದರೆ ಇತ್ತೀಚಿನ ದಿನಗಳಲ್ಲಿ ಪಾಲಕರು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಕನ್ನಡ ಭಾಷೆಯಿಂದ ದೂರಸರಿಸುತ್ತಿದ್ದಾರೆ.ಇದರಿಂದ ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮದ ಶಾಲೆಗಳಿಗೆ ತೊಡಕುಂಟಾಗುತ್ತಿದೆ ಎಲ್ಲಾ ಭಾಷೆಗಳು ಮಾತನಾಡೋಣ ಆದರೆ ನಮ್ಮ ಹೃದಯದಲ್ಲಿ ಕನ್ನಡ ಮಾತ್ರ ಇರಲಿ ಎಂದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಟಗುಪ್ಪಾ ತಾಲೂಕಿನ ಪ್ರಧಾನ ಕಾರ್ಯದರ್ಶಿಯಾದ ರಾಜಶೇಖರ ಉಪ್ಪಿನ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ 109 ವರ್ಷ ಇತಿಹಾಸವಿದೆ ಕನ್ನಡ ನಾಡು-ನುಡಿಗಾಗಿ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಕರ್ನಾಟಕ ಅಷ್ಟೇ ಅಲ್ಲ ದೇಶ ವಿದೇಶಗಳಲ್ಲಿ ಕನ್ನಡದ ಕಂಪು ಸೂಸಲು ನಿರಂತರ ಕಾರ್ಯ ಮಾಡುತ್ತಿದೆ ಎಂದರು. ಸಂಜೀವನ್ ಬೋಸ್ಲೆ,ವೀರೇಶ ತೂಗಾಂವ, ಜಗನ್ನಾಥ ಗಾದಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಮೇಶ ಸಲಗರ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಇವರು ಕನ್ನಡ ಭಾಷೆ ಮತ್ತು ಸಂಸ್ಕøತಿ ಉಳಿದು ಬೆಳೆಯಬೇಕಾದರೆ ಒಂದು ಪ್ರಾತಿನಿಧಿಕ ಸಂಸ್ಥೆ ಅಗತ್ಯವಾಗಿದೆ ಎಂದು ಮನಗಂಡು 05/05/1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿದರು. ಮುಂದೆ ಇದು ಕನ್ನಡ ಸಾಹಿತ್ಯ ಪರಿಷತ್ ಆಯಿತು. ಇಂದು ಸುಮಾರು 2,50,000 ರಷ್ಟು ಸದಸ್ಯರನ್ನು ಹೊಂದಿದೆ ದೇಶ ವಿದೇಶ ಜಿಲ್ಲೆ ತಾಲೂಕು ಹೋಬಳಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ.ಇಂತಹ ಅದ್ಭುತ ಇತಿಹಾಸ ಮತ್ತು ಸಾಂಸ್ಕೃತಿ ಹೊಂದಿರುವ ಕನ್ನಡ ಭಾಸೆ ನಮ್ಮೆಲ್ಲರ ಉಸಿರಾಗಲಿ ಎಂದರು ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರಭು ನಿಣ್ಣಿ,ಮಹೇಶ, ರಾಣಿ ಮಂಗಲಗಿ,
ಮಂಜುಳಾ ಧನ್ನೂರ್ ಭವಾನಿ ಮೈಲಾರ್ ಮುಂತಾದವರು ಉಪಸ್ಥಿತರಿದ್ದರು.