ದಂಡೋತಿಯ ಭೃಂಗಿಮಠ ಮಲ್ಲಿಕಾರ್ಜುನಗೆ ‘ಅತ್ಯುತ್ತಮ” ಪ್ರಶಸ್ತಿ ಪ್ರದಾನ
ಕಲಬುರಗಿ:ಮೇ.6: ಪ್ರಶಸ್ತಿ ಸನ್ಮಾನಗಳು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮಾಣಿಕ ನಿಸ್ಪಕ್ಷಪಾತ ವ್ಯಕ್ತಿಗಳಿಗೆ ಹುಡುಕಿಕೊಂಡು ಬರಲಿ ಆ ಮೂಲಕ ಅತ್ಯುತ್ತಮ ಸೇವಾಜೀವಿಗಳನ್ನು ಅವರು ಬದುಕಿದ್ದಾಗಲೇ ಗೌರವಿಸುವ ಸಂಸ್ಕಾರ ಆಧುನಿಕ ವಿಶ್ವದಲ್ಲಿ ಅಗತ್ಯವಾಗಿದೆ ಎಂದು ಕಂಬಳೇಶ್ವರ ಮಠದ ಪೀಠಾಧಿಕಾರಿ ಷ.ಬ್ರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಅವರು ದಂಡೋತಿಯ ಭೃಂಗಿಮಠದಲ್ಲಿ ನಡೆದ ಪೂಜ್ಯ ಗದಿಗಯ್ಯ ಸ್ಬಾಮಿಗಳ ಪುಣ್ಯ ಸ್ಮರಣೆ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮ ಮಾಲಿಕೆಯ ಸಂಧರ್ಭದಲ್ಲಿ ಶಿವಮೊಗ್ಗಾದ ಏಜಾಜ್ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ ಅವರು ಕೊಡಮಾಡುವ 2024 ನೇ ಸಾಲಿನ “ಅತ್ಯುತ್ತಮ” ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡುತ್ತಿದ್ದರು.
ಇಂದಿನ ಬೀಜೀ ಜೀವನದಲ್ಲಿ ನಿಜವಾಗಿ ಸಮಾಜ ಸೇವೆ ಮಾಡುವವರ ಕೊರತೆ ಎದ್ದು ಕಾಣುತ್ತಿದೆ ಇಂತಹದ್ದರಲ್ಲಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಸತತ 33 ವರುಷಗಳಿಂದ ಕರ್ನಾಟಕ,ಆಂದ್ರ,ಗೋವಾ,ಮಹರಾಷ್ಡ್ರ, ಮುಂತಾದ ಕಡೆ ಮಾಡಿದ ಅವರ ಸೇವೆ ಮತ್ತು ಕೀರ್ತಿ ಕಲ್ಯಾಣ ನಾಡು ಹೆಮ್ಮೆ ಪಡುವ ಸಂಗತಿಯಾಗಿದೆ,ಸದಾ ಭಾವೈಖ್ಯತೆಯಲ್ಲೆ ಒಂದಿಲ್ಲ ಒಂದು ವಿಶೇಷ ಕಾರ್ಯಕ್ರಮಗಳ ಮೂಲಕ ಸಮಾಜಿಕ ಸೇವೆ ಮಾಡುತ್ತಿದ್ದಾರೆ ಇಂತಹವರಿಗೆ ಶಿವಮೊಗ್ಗದಿಂದ ದಂಡೋತಿಗೆ ಬಂದು ಪ್ರಶಸ್ತಿ ನೀಡಿರುವುದು ಸಂತೋಷಕರ ಸಂಗತಿ ಎಂದರು.
ಡಾ : ಚಂದು ಲಿಂಬು ಜಾಧವ್ ಅವರು ಮಾತನಾಡಿ ಭೃಂಗಿಮಠ ಅವರು ಜಾತಿಭೇದ ಮಾಡದೇ ಬಡಜನರ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ .ಇಂದಿನ ದಿನಮಾನಗಳಲ್ಲಿ ಇವರಂತಹ ಗುರುಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯರಾಗಿದ್ದಾರೆ,ಮಲೆನಾಡಿನ ಅಲ್ಪ ಸಂಖ್ಯಾತರ ಸಂಸ್ಥೆಯೊಂದು ಅತ್ಯುತ್ತಮರಾದ ಭೃಂಗಿಮಠರನ್ನು ಹುಡುಕಿಕೊಂಡು ಬಂದು ಮನೆ ಬಾಗಿಲಿಗೆ ಪ್ರಶಸ್ತಿ ನೀಡಿರುವುದು ಖುಷಿಕೊಡುವ ವಿಚಾರವಾಗಿದೆ ಎಂದರು.
ಕವಿ ಸೇನೆಯ ಜಿಲ್ಲಾಧ್ಯಕ್ಷ ರಾಜು ಹಿರೇಮಠ ಅವರು ಮಾತನಾಡಿ ಪ್ರಶಸ್ತಿಗಳು ಕಲಬುರಗಿ ನಾಡಿನ ಭೃಂಗಿಮಠರಿಗೆ ದೊರಕಿರುವುದು ಉತ್ತಮ ಜನರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂಬುದಕ್ಕೆ ಇದೊಂದು ಉದಾರಣೆಯಾಗಿದೆ,ಸಮಾಜಸೇವೆಗೆ ಪ್ರಮಾಣಿಕರಾದ ಭೃಂಗಿಮಠ ಅವರ ಆದರ್ಶ ಇತರರಿಗೆ ಮಾದರಿ ಎಂದರು.
ಬಾಲಯೋಗಿನಿ ಜಯಶ್ರೀ ಅವರು ಮಾತನಾಡಿ ಸಮಾಜದ ಸವಾರ್ಂಗಿಣ ಅಭಿವೃದ್ದಿಗಾಗಿ ಸಮಾಜ ಸೇವಕರ ಅಗತ್ಯವಿದೆ ಎಂದರು.
ಅತ್ಯುತ್ತಮ ಪ್ರಶಸ್ತಿ ನೀಡುವ ಶಿವಮೊಗ್ಗದ ಸಂಸ್ಥೆಯ ಪರವಾಗಿ ಸೈಯದ್ ಜಾಹೀರ ಆಹ್ಮದ ಫನ ಮಾತನಾಡಿ ನಿಸ್ವಾರ್ಥ ಬದುಕು,ರಾಜಕೀಯದಿಂದ ದೂರ ಇರುವ ಭೃಂಗಿಮಠರು ಸಮಾಜದಲ್ಲಿ ಪರಸ್ಪರ ಭಾವೈಖ್ಯತೆ ಕಾಪಾಡುವ ಕಾರ್ಯಕ್ರಮಗಳನ್ನು ಹಲವಾರು ವರುಷಗಳಿಂದ ಹಮ್ಮಿಕೊಳ್ಳುತ್ತಸ ಬಂದಿರುವುದು ಶ್ಲಾಘನೀಯ ಇದನ್ನು ಗೌರವಿಸಿ ” ಅತ್ಯುತ್ತಮ ಪ್ರಶಸ್ತಿ ಸಹ ನೀಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ಮಾತಾ ,ಬಾಲಯೋಗಿನಿ, ಶ್ರೀ ಗುರುವಿನ ಮಠ,ಮುಂತಾದವರು ಇದ್ದರು.
ಅಕ್ಕಮಹಾದೇವಿ ಡಾ ಜಯಶ್ರೀ ಜಧಾವ್ ,ಬಸಲಿಂಗಮ್ಮ ಭೃಂಗಿಮಠ,ನೀಲಕಂಠಯ್ಯ ,ಯಕಮಯಿ,ಮುಂತಾದವರು ಉಪಸ್ಥಿತರಿದ್ದರು.