ಸಂತೆಯಲ್ಲಿ ಮತದಾನ ಜಾಗೃತಿ – ಪಟ್ಟಣದಲ್ಲಿ ಮ್ಯಾರಾತಾನ್
ಸಂಜೆವಾಣಿ ವಾರ್ತೆ
ಸಂಡೂರು: ಮೇ: 6:  ಸಂಡೂರು: ಮತದಾನ ಮಾಡಿದವನೇ ಮಹಾಶೂರ ಅದ್ದರಿಂದ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ರಕ್ಷಿಸಿ ಎಂದು ಸ್ವೀಪ್ ನೋಡಲ್ ಅಧಿಕಾರಿ ಷಡಾಕ್ಷರಯ್ಯ ಕರೆನೀಡಿದರು.
ಅವರು  ತಾಲೂಕು ಆಡಳಿತ ಹಾಗೂ ತಾಲೂಕು ಸಿಹಿ ಸಮಿತಿ ಸಂಡೂರು ವತಿಯಿಂದ ಜಾಗೃತಿ ಮತದಾನ ಜಾಗೃತಿ ಜಾತ ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಓಟ ಹಾಗೂ ಭಾನುವಾರದ ಸಂತೆಯ ದಿವಸ ಎಲ್ಲಾ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಮತದಾನ ಜಾಗೃತಿ ಅಭಿಯಾನವನ್ನು ಕರಪತ್ರ ಹಂಚುವ ಮೂಲಕ ಹಮ್ಮಿಕೊಳ್ಳಲಾಯಿತು. ಸದರಿ ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಮಾನ್ಯ ಸಹಾಯಕ ಚುನಾವಣಾ ಅಧಿಕಾರಿಗಳಾದ ಸತೀಶ್ ರವರು ಉದ್ಘಾಟಿಸಿದರು. ಮ್ಯಾರಥಾನ್ ಓಟ ತಾಲೂಕು ಪಂಚಾಯತಿಯಿಂದ ಪ್ರಾರಂಭವಾಗಿ ವಿಜಯ ಸರ್ಕಲ್ ಪುರಸಭೆ ಬಸ್ ನಿಲ್ದಾಣ ಉಡುಸಲಮ್ಮ ದೇವಿಯ ದೇವಸ್ಥಾನದ ಮಾರ್ಗವಾಗಿ ಎಪಿಎಂಸಿ ಮಾರ್ಕೆಟ್ ನಲ್ಲಿ ಅಂತ್ಯಗೊಂಡಿತು. ನಂತರ ಎಪಿಎಂಸಿ ಮಾರ್ಕೆಟ್ ನಲ್ಲಿ ಭಾನುವಾರ ಸಂತೆಯ ದಿನವಾದ ಇಂದು ಅತ್ಯಂತ ಹೆಚ್ಚಿನ ಜನಸಂದಣಿ ಇದ್ದ ಪ್ರಯುಕ್ತ ಸಾರ್ವಜನಿಕರಲ್ಲಿ ಹಾಗೂ ಮಳಿಗೆಯ ವ್ಯಾಪಾರಸ್ಥರಲ್ಲಿ ಮತದಾನ ಜಾಗೃತಿಯನ್ನು ಕರಪತ್ರವನ್ನ ಪ್ರತಿಯೊಬ್ಬರಿಗೂ ಹಂಚುವ ಮೂಲಕ ಹಮ್ಮಿಕೊಳ್ಳಲಾಯಿತು. ನಂತರ ತಾಲೂಕು ಪಂಚಾಯತಿಯಲ್ಲಿ ಪ್ರತಿಜ್ಞಾವಧಿ ಸ್ವೀಕರಿಸುವ ಮೂಲಕ ಜಾಗೃತಿ ಅಭಿಯಾನ ಅಂತ್ಯಗೊಂಡಿತು.
ಸದರಿ ಸಮಯದಲ್ಲಿ ತಾಲೂಕು ಸಮಿತಿ ಅಧ್ಯಕ್ಷರಾದ ಹೆಚ್ ಷಡಕ್ಷರಯ್ಯ ತಾಲೂಕು ತಹಶೀಲ್ದಾರರಾದ ಶ್ರೀ ಅನಿಲ್ ಕುಮಾರ್, ಪುರಸಭೆ ಮುಖ್ಯ ಅಧಿಕಾರಿಗಳಾದ ಜಯಣ್ಣ, ತಾಲೂಕ್ ನಂದಿಹಳ್ಳಿ ಪಿಜಿ ಸೆಂಟರ್ ನ ವಿದ್ಯಾರ್ಥಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಪುರಸಭೆ ಸಿಬ್ಬಂದಿಗಳು  ಹಾಜರಿದ್ದರು.
ಅಲ್ಲದೆ ಎಲ್ಲರೂ ಸಹ ಪಟ್ಟಣದ ಭಾನುವಾರದ ಸಂತೆಯಲ್ಲಿ ತರಕಾರಿ ವ್ಯಪಾರಿಗಳಿಗೆ, ಕೊಳ್ಳುವವರಿಗೆ ಜಾಗೃತಿ ಪತ್ರಗಳನ್ನು ನೀಡಿ ಕಡ್ಡಾಯ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಿದರು.
One attachment • Scanned by Gmail