ಚುನಾವಣಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರ: ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣೆ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.06: ನಗರದ ವಿವೇಕಾನಂದ  ಪ್ರೌಢಶಾಲೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಅಂಗವಾಗಿ ಚುನಾವಣಾ ಕಾರ್ಯ ನಿಮಿತ್ತ ಆಗಮಿಸಿದ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ತಾಲೂಕಿನ 228 ಮತಗಟ್ಟೆ ಕೇಂದ್ರಗಳಿಗೆ 228 ಪ್ರಥಮ ಚಿಕಿತ್ಸಾ ಪೆಟ್ಟಿಗೆ ಗಳನ್ನು ತಹಶಿಲ್ದಾರ್ ಶಂಶಾಲಂ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ಅವರು  ಚುನಾವಣಾ ನೋಡಲ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಬಿಸಿಲಿನ ತಾಪಮಾನದಿಂದ ಯಾರಿಗು ತೊಂದರೆ ಆಗಬಾರದು ಎಂದು ಓ ಆರ್ ಎಸ್ ಪೌಡರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜ್ವರ, ನೆಗಡಿ, ತಲೆನೋವು, ಹೊಟ್ಟೆ ನೋವು, ಮೈ ಕೈ ನೋವು, ವಾಂತಿ ಭೇದಿ, ದಮ್ಮು ಮತ್ತು ಅಸ್ತಮಕ್ಕೆ ಸಂಬಂಧಿಸಿದ ಮಾತ್ರೆಗಳು ಹಾಗೂ ಒಂದು ವೇಳೆ ಗಾಯಗೊಂಡಲ್ಲಿ ಬ್ಯಾಂಡೇಜ್ ಬಟ್ಟೆ ಹತ್ತಿ ಮತ್ತು ಪವೋಡಿನ್ ಅಯೋಡಿನ್ ಆಯಂಟ್ ಮೆಂಟ್ ಗಳನ್ನು ನೀಡಲಾಯಿತು.
ಪ್ರತಿ ಮತದಾನ ಕೇಂದ್ರಗಳಿಗೆ ಒಬ್ಬರಂತೆ ಒಟ್ಟು 228 ಆಶಾ ಕಾರ್ಯಕರ್ತೆಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟಕ್ಕೆ ವೈದ್ಯಕೀಯ ತುರ್ತು ಸೇವೆಗಾಗಿ ವೈದ್ಯರನ್ನು ಆರ್‌ಬಿಎಸ್ ಕೆ ವೈದ್ಯರನ್ನು, ಸಹಾಯಕರನ್ನು ಮತ್ತು ಆಂಬುಲೆನ್ಸ್ ಅನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಹಾಯಕ ಚುನಾವಣಾಧಿಕಾರಿ ತಿರುಮಲೇಶ್, ಆರೋಗ್ಯ ತಪಾಸಣಾ ಶಿಬಿರದಲ್ಲಿ ತಾಲೂಕು ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಪ್ರಹ್ಲಾದ್, ಕ್ಷೇತ್ರ ಶಿಕ್ಷಣಾ ಅಧಿಕಾರಿ ಖಾಸಿಂ, ಡಾ. ಸಾಯಿ ಕುಮಾರ್,  ನರ್ಸಿಂಗ್ ಆಫೀಸರುಗಳು, ಫಾರ್ಮಸಿ ಆಫೀಸರುಗಳು ಮತ್ತು ಗ್ರೂಪ್ ಡಿ ಸಿಬ್ಬಂದಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಇದ್ದರು.