ಕೊಳಗಲ್ಲು ಗ್ರಾಮದಲ್ಲಿ ಸಚಿವ ನಾಗೇಂದ್ರ ಭರ್ಜರಿ ರೋಡ್ ಶೋ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ 6: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ನಿನ್ನೆ ಸಂಜೆ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ  ಪರ ಭರ್ಜರಿ ರೋಡ್ ಶೋ ನಡೆಸಿ  ಮತಯಾಚನೆ ಮಾಡಿದರು.
ರೋಡ್ ಶೋ ನಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ಮೂಲಕ ಗಮನ ಸೆಳೆದರಲ್ಲದೆ. ಗ್ರಾಮಕ್ಕೆ ಭೇಟಿ ನೀಡಿದ ಸಚಿವ ನಾಗೇಂದ್ರ ಅವರ ಮೇಲೆ ಹೂವಿನ‌ ಮಳೆ ಗೆರೆದು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ನಾಗೇಂದ್ರ ಅವರು ಕೊಳಗಲ್ಲು ಗ್ರಾಮದ ಜನರ ಆಶೀರ್ವಾದದಿಂದ ನಾನು  ಗೆದ್ದು ಶಾಸಕನಾಗಿ, ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದೇನೆ. ಅದರಂತೆ ನನಗಿಂತಲೂ ಹೆಚ್ಚಿನ ಮತಗಳನ್ನು ತುಕಾರಾಂ ಅವರಿಗೆ ನೀಡುವಂತೆ ಮನವಿ ಮಾಡಿದರು.
ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ‘ಪಂಚ ಗ್ಯಾರಂಟಿ’ ದೊಡ್ಡ ಸದ್ದು ಮಾಡಿತ್ತು. ‘ಗ್ಯಾರಂಟಿ’ಗಳ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಆದರೆ ಚುನಾವಣೆಯಲ್ಲಿ ನೀಡಿದ ಮಾತಿನಂತೆ ಪಂಚ ಗ್ಯಾರೆಂಟಿಗಳನ್ನ ನೀಡುವ ಮೂಲಕ ಮಹಿಳೆಯರು, ಬಡವರು, ದೀನ ದಲಿತರ ಧ್ವನಿಯಾಗಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡ ವ್ಯೆಕ್ತಿ ಯಾರಾದ್ರು ಇದ್ರೆ ಅದು ನಮ್ಮ ಸನ್ಮಾನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ ಅವರು ಮಾತ್ರ ಎಂದು ಹೇಳಿದರು.
ಇದೇ ತಿಂಗಳು 7ನೇ ತಾರೀಖು ನಡೆಯಲಿರುವ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ‘ಪಂಚ ಗ್ಯಾರಂಟಿ’ ಗಳನ್ನು ನಮ್ಮ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ  ಹಾಗೂ  ರಾಹುಲ್ ಗಾಂಧಿಜೀ ಅವರು ಘೋಷಣೆ ಮಾಡಿದ್ದಾರೆ. ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ. ಆದರೆ ಕೋಮುವಾದಿ ಪಕ್ಷದ ಜನರು ಬರುತ್ತಾರೆ ಅವರ ಅಮಿಷಕ್ಕೆ ಬಲಿಯಾಗದೆ ಕಾಂಗ್ರೆಸ್ ಪಕ್ಷದ ಗುರ್ತಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ದಮ್ಮೂರು ಹನುಮಪ್ಪ, ಪ್ರಭುರೆಡ್ಡಿ, ಲೀಡಕರ್  ಅಧ್ಯಕ್ಷರ ಮುಂಡ್ರಗಿ ನಾಗರಾಜ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಎರ್ರಿಸ್ವಾಮಿ,  ಜಿಲ್ಲಾ ಪಂಚಾಯತ್  ಮಾಜಿ ಸದಸ್ಯ ಎ. ಮಾನಯ್ಯ, ಕಾಂಗೇಸ್ ಮುಖಂಡರಾದ ಪಿ.ಜಗನ್, ಸಿದ್ದಮ್ಮನಳ್ಳಿ ಹುಲಿಯಪ್ಪ, ಬೆಣಕಲ್ಲು ಬಸವರಾಜಗೌಡ, ಕುಡತಿನಿ ರಾಮಾಂಜನೇಯ, ನಾಗರಡ್ಡಿ, ಉಪ್ಪಾರ ಶಿವರಾಮ, ಹುಚ್ಚಿರಪ್ಪ, ಬಗರ್ ಹುಕುಂ ಕಮೀಟಿ ಅಧ್ಯಕ್ಷ ಹೆಚ್.ತಿಮ್ಮನಗೌಡ, ಅಣ್ಣಾ ನಾಗರಾಜ್, ಗೋವರ್ಧನ ರೆಡ್ಡಿ, ಯರ್ರಗುಡಿ ಮುದಿಮಲ್ಲಯ್ಯ, ಗೋನಾಳ ನಾಗಭೂಷಣ ಗೌಡ, ಶ್ರೀನಾಥ್, ಕೊಳಗಲ್ಲು ಗ್ರಾಮದ ಯುವ ಮುಖಂಡರಾದ ಧನಂಜಯ, ಈರಣ್ಣ, ಸುರೇಶ್, ಗಂಗಾಧರ, ಷಣ್ಮುಖ, ದಿವಾಕರ, ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಹಾಜರಿದ್ದರು.