ಎಫ್ ಎಸ್ ಟಿ ಮಾಹಿತಿ, ಅಬಕಾರಿ ದಾಳಿ,ಸೂಲದಹಳ್ಳಿ : ಅಕ್ರಮ ಮದ್ಯ ಜಪ್ತಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.6 :- ಲೋಕಸಭಾ ಚುನಾವಣೆಗೆ ನಿಯೋಜಿಸಿದ ಹೊಸಹಳ್ಳಿ ವ್ಯಾಪ್ತಿಯ ಎಫ್ ಎಸ್ ಟಿ ತಂಡದ ಮಾಹಿತಿಯಂತೆ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಮಧ್ಯರಾತ್ರಿಯಾದರು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ಕೂಡ್ಲಿಗಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರು ಸಾವಿರಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿರುವ ಘಟನೆ ತಾಲೂಕಿನ ಸೂಲದಹಳ್ಳಿ ಗ್ರಾಮದಲ್ಲಿ ಇಂದು ನಸುಕಿನ ಜಾವ 1ಗಂಟೆಗೆ ಜರುಗಿದೆ.
ಸಂದೀಪ (40) ಎಂಬುವ ಆರೋಪಿಯಾಗಿದ್ದು ಈತನು ದಾಳಿ ವೇಳೆ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈತನು ಯಾವುದೇ ಸರ್ಕಾರದ ಅನುಮತಿ ಇಲ್ಲದೆ ಮಧ್ಯರಾತ್ರಿವರೆಗೂ ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಪಡೆದ ಲೋಕಸಭಾ ಚುನಾವಣೆಯ ಹೊಸಹಳ್ಳಿ ವ್ಯಾಪ್ತಿಯ  ಎಫ್ ಎಸ್ ಟಿ ತಂಡದ ಗುರುಬಸವರಾಜ ಎನ್ನುವವರ ಮಾಹಿತಿಯಂತೆ ಕೂಡ್ಲಿಗಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಬಸವರಾಜ , ಅಬಕಾರಿ ಇಲಾಖೆ ಮುಖ್ಯ ಪೇದೆಗಳಾದ ನಾಗರಾಜ ಹಾಗೂ ರಾಘವೇಂದ್ರ ಇತರರು ದಾಳಿ ನಡೆಸಲಾಗಿ ಆರೋಪಿ ಸಂದೀಪ ಈ ವೇಳೆ  ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ 6  ಬೀಯರ್ ಬಾಟಲು ಸೇರಿದಂತೆ 6ಸಾವಿರಕ್ಕೂ ಅಧಿಕ ಮೌಲ್ಯದ ಮದ್ಯದ ಪೌಚ್ ಗಳನ್ನು ಜಪ್ತಿ ಮಾಡಲಾಗಿದ್ದು ಆರೋಪಿ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಕೂಡ್ಲಿಗಿ  ಅಬಕಾರಿ ಇನ್ಸ್ಪೆಕ್ಟರ್ ಬಸವರಾಜ ಪತ್ರಿಕೆಗೆ  ತಿಳಿಸಿದ್ದಾರೆ.
One attachment • Scanned by Gmail