ಮಾಜಿ ಶಾಸಕರಿಂದ ದಲಿತರ ಒಡೆದಾಳುವ  ನೀತಿ  : ದೊಡ್ಡಬಸಪ್ಪ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಮಾಜಿ ಶಾಸಕ ಎಸ್. ಭೀಮನಾಯ್ಕ್  ದಲಿತ ಸಮಾಜವನ್ನು ಒಡೆದಾಳುತ್ತಿದ್ದಾರೆ ಎಂದು ಡಾ. ಬಿ ಆರ್ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಹೆಚ್. ದೊಡ್ಡಬಸಪ್ಪ ಹೇಳಿದರು.
ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ  ಮಾತನಾಡಿದರು. ಇತ್ತೀಚಿಗೆ  ಮಾಜಿ ಶಾಸಕ ಭೀಮ ನಾಯ್ಕ್ ತಮ್ಮ ಫಾರo ಹೌಸ್ ನಲ್ಲಿ ದಲಿತ ಮುಖಂಡರ ಸಭೆ ನಡೆಸಿದರು. ಸ್ಥಳೀಯರಾದ ನಮಗೆ ಯಾವುದೇ ಮಾಹಿತಿ ನೀಡದೆ ಫೋನ್ ಕರೆ ಮಾಡದೆ ಬಳ್ಳಾರಿಯ ದಲಿತ ಮುಖಂಡರನ್ನು ಕರೆಸಿರುವುದು ಎಷ್ಟರ ಮಟ್ಟಿಗೆ ಸರಿ? ಇದಕ್ಕೆ ನಮಗೆ ಅಸಮಾಧಾನವಿದೆ. ದಲಿತರನ್ನು ಒಡೆದಾಳವ ನೀತಿಯಲ್ಲಿ ವರ್ತಿಸುತ್ತಿರುವುದು ಶೋಭೆ ತರುವಂತದ್ದಲ್ಲ   ಸಮಾಜ ನಿರ್ಮಾಣಕ್ಕೆ ಸಂವಿಧಾನ ಸಹಕಾರಿಯಾಗಿದೆ. ಇಂತಹ ಸಂವಿಧಾನವನ್ನು ಕೆಲವು ಬಿಜೆಪಿ ನಾಯಕರು ಬದಲಾಯಿಸುವ ಮಾತನ್ನು ಹೇಳುತ್ತಿದ್ದಾರೆ. ಇದಕ್ಕೆ ದಲಿತ ಸಂಘಟನೆಗಳು ವಿರೋಧವಿದೆ ಎಂದು ಡಾ. ಬಿ ಆರ್ ಅಂಬೇಡ್ಕರ್ ಸಂಘದ  ತಾಲೂಕ ಅಧ್ಯಕ್ಷ ದೊಡ್ಡಬಸಪ್ಪ ತಿಳಿಸಿದರು.
. ಈ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ. ಧರ್ಮ ಮತ್ತು ಜಾತಿ ಹೆಸರಿನಲ್ಲಿ ಸಾಮಾಜಿಕ ಅಸಮಾನತೆ ಮೂಡಿಸುವ ಹುನ್ನಾರ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಡಾ. ಅಂಬೇಡ್ಕರ್ ಸಂಘ ಚಲವಾದಿ ಮಹಾಸಭಾ, ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ತಿಳಿಸಿದರು.
 ಈ ಸಂದರ್ಭದಲ್ಲಿ ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಹಳೆ ಬಸವರಾಜ್, ಪ್ರಧಾನ ಕಾರ್ಯದರ್ಶಿ ಮಾಲವಿ ಪ್ರಕಾಶ್, ದಲಿತ ಮುಖಂಡರಾದ ಬೆಣಕಲ್ ಪ್ರಕಾಶ್ ಎಚ್ ಲೋಕಪ್ಪ  ನಿಂಗಪ್ಪ ಶಿವಕುಮಾರ್ ಒಮೇಶ , ಕೋಟೆಪ್ಪ ಬನ್ನಿಗೋಳು ಯಮನೂರಪ್ಪ ದೊಡ್ಡ ಬಸವರಾಜ್ ಚಳುವಳಿ ಶಿವರಾಜ್ ರಮೇಶ್, ಲೆಕ್ಕಪ್ಪ  ಇತರರಿದ್ದರು