ದಲಿತ ಸಮುದಾಯಕ್ಕೆ ಎದೆ ಗಾರಿಕೆವುಳ್ಳ ನಾಯಕ ಅನಿವಾರ್ಯ: ಆರ್.ಮಹಾದೇವಪ್ಪ ಅಭಿಪ್ರಾಯ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.06:- ಹಳ್ಳಿಗಾಡಿನಿಂದ ಬಂದಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಶೋಕಪುರಂ ಆಶ್ರಯ ತಾಣವಾಗಿತ್ತು. ಇದೊಂದು ಸಾಂಸ್ಕೃತಿಕ ಕೇಂದ್ರವೂ ಹೌದು. ಇಲ್ಲಿ ಹುಟ್ಟಿ ಬೆಳೆದ ಸಂಸದ ವಿ.ಶ್ರೀನಿವಾಸಪ್ರಸಾದ್ ಗಟ್ಟಿಯಾದ ಧ್ವನಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಕರ್ನಾಟಕ ಬುದ್ಧಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ ಹೇಳಿದರು.
ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧವಿಹಾರದಲ್ಲಿ ಕರ್ನಾಟಕ ಬುದ್ಧಧಮ್ಮ ಸಮಿತಿಯಲ್ಲಿ ಶನಿವಾರ ಸಂಜೆ ನಡೆದ ಸಂಸದರಾದ ವಿ. ಶ್ರೀನಿವಾಸ ಪ್ರಸಾದ್‍ರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ವಾತನಾಡಿದರು.
ಬದನವಾಳು ಗಲಾಟೆ ನಂತರ ದಲಿತರ ಮೇಲಿನ ದೌರ್ಜನ್ಯ ಒಂದಷ್ಟು ಕಡಿಮೆಯಾದವು. ಈ ಪ್ರಕರವು ವಿ.ಶ್ರೀನಿವಾಸಪ್ರಸಾದ್‍ರವರಿಗೆ ದೊಡ್ಡ ನಾಯಕತ್ವ ತಂದು ಕೊಟ್ಟಿತು. ಅಲ್ಲಿಂದ ದಲಿತ ಸಮುದಾಯಕ್ಕೆ ಗಟ್ಟಿಯಾದ ಧ್ವನಿಯಾಗಿದ್ದರು. ದಲಿತ ರಾಜಕಾರಣದಲ್ಲಿ ಪ್ರಸ್ತುತ ಇಂತಹ ಗಟ್ಟಿತನ, ಎದೆಗಾರಿಯುಳ್ಳ ಧ್ವನಿ ಇರುವ ನಾಯಕ ಅನಿವಾರ್ಯ ಎಂದರು.
ಸಮಿತಿಯ ಅಧ್ಯಕ್ಷ ಪೆÇ್ರ.ಡಿ.ನಂಜುಂಡಯ್ಯ ವಾತನಾಡಿ, ಸಂಸದ ವಿ.ಶ್ರೀನಿವಾಸಪ್ರಸಾದ್‍ರವರ ತಮ್ಮ ರಾಜಕೀಯ ಜೀವನವನ್ನು ಜನಸಂಘದಿಂದ ಪ್ರಾರಂಭಿಸಿ, ಜನ ಸಂಘದಿಂದಲೇ ಅವರು ರಾಜಕೀಯ ನಿವೃತ್ತಿಯನ್ನು ಘೋಷಿಸಿದರು. ಆದರೆ ಅವರ ರಾಜಕೀಯ ಜೀವನದಲ್ಲಿ ದಲಿತ ಸಮುದಾಯಕ್ಕೆ ಹಾಗೂ ಅವರ ಹೆಸರಿನಲ್ಲಿ ಶಾಲೆ-ಕಾಲೇಜು, ಆಸ್ಪತ್ರೆ ಹೀಗೆ ಗುರುತರವಾದಂತಹದನ್ನು ಬಿಟ್ಟು ಹೋಗದಿರುವುದು ನೋವಿನ ಸಂಗತಿ ಎಂದರು.
ಪತ್ರಕರ್ತ ದೀಪಕ್ ವಾತನಾಡಿ, ಸಂಸದ ವಿ.ಶ್ರೀನಿವಾಸಪ್ರಸಾದ್ ರವರ ಗಟ್ಟಿತನ ಎಲ್ಲರಿಗೂ ವಾದರಿ. ಪ್ರಸಾದ್ ಒಬ್ಬ ದಲಿತ ಪಾಳೇಗಾರರಾಗಿದ್ದರು. ದಲಿತರಿಗೆ ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲವೂ ಸಿಕ್ಕಿದೆ. ಆದರೆ ಧ್ವನಿ ಇದ್ದು ಇಲ್ಲದವರಂತಾಗಿದ್ದರು. ಇದನ್ನು ಯಶಸ್ವಿಯಾಗಿ ಶ್ರೀನಿವಾಸಪ್ರಸಾದ್ ನಿಭಾಯಿಸಿದ್ದರು. ಆದರೆ ಅವರ ಇತ್ತೀಚಿನ ರಾಜಕೀಯ ನಡೆ ಸಮುದಾಯಕ್ಕೆ ಬೇಸರ ತರಿಸಿತು ಎಂದರು.
ಮುಖಂಡ ಬಿ.ಎಂ.ಲಿಂಗರಾಜ್ ವಾತನಾಡಿ, ವಿ.ಶ್ರೀನಿವಾಸಪ್ರಸಾದ್‍ರವರು ಎದೆಗಾರಿಕೆ ಇದ್ದ ವ್ಯಕ್ತಿ. ಪ್ರಾವಾಣಿಕವಾಗಿ ರಾಜಕಾರಣ ಮಾಡಿದರು. ಯಾವುದೇ ಭ್ರಷ್ಟಾಚಾರವಿಲ್ಲದೆ ರಾಜಕೀಯ ಜೀವನ ನಡೆಸಿದರು. ಆದರೆ ಅವರ ನಂತರದ ಪರ್ಯಾಯ ರಾಜಕಾರಣಿಯನ್ನು ಹುಟ್ಟು ಹಾಕದಿರುವುದು ಬೇಸರದ ಸಂಗತಿ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಸಮ್ಮುಖವನ್ನು ಬೌದ್ಧಬಿಕ್ಕು ಸೋದೆ ಭಂತೇಜಿ ವಹಿಸಿದ್ದರು. ಸಮಿತಿಯ ಸಹ ಕಾರ್ಯದರ್ಶಿ ಎಚ್.ಶಿವರಾಜ್, ಖಜಾಂಚಿ ಎಂ.ಸಾವಕಯ್ಯ, ನಿವೃತ್ತ ಇಂಜಿನಿಯರ್ ಆರ್.ನಟರಾಜು, ರಾಜು ಹಂಪಾಪುರ, ಪುಟ್ಟಸ್ವಾಮಿ, ನಿಸರ್ಗ ಸಿದ್ದರಾಜು, ಮಹದೇವಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಅಹಿಂದ ಜವರಪ್ಪ, ಸಾಹಿತಿ ಕೃಷ್ಣಮೂರ್ತಿ ಚಮರಂ, ಮಲ್ಕುಂಡಿ ಮಹದೇವಸ್ವಾಮಿ, ಪಿ.ಸಂಬಯ್ಯ , ಹರಕುವಾರ್, ಬಸವಣ್ಣ, ರಾಘವೇಂದ್ರ ಅಪುರಾ, ಕ್ರಾಂತಿರಾಜ್ ಒಡೆಯರ್, ವಿಜುಂಕುವಾರ್, ವಿಶಾಲ್, ವಿವಿಧ ದಲಿತಪರ ಸಂಘಟನೆಗಳ ಮುಖಂಡರು, ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.