ಪೌರಾಣಿಕ ನಾಟಕಗಳು ಸಂಸ್ಕೃತಿಯ ಪ್ರತೀಕ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.06: ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕವಾಗಿದ್ದು ನಾಟಕಗಳಲ್ಲಿ ಬರುವ ಪಾತ್ರಗಳು ನಾವು ಒಳ್ಳೆಯ ವಿಚಾರಗಳತ್ತ ಮುಖಮಾಡಲು ಸಾಧ್ಯವೆಂದು ಮಿತ್ರ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗು ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ ಹೇಳಿದರು. ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಮತ್ತು ಆರೆಕಲ್ಲಮ್ಮ ನಾಟಕ ಮಂಡಳಿಯವರು ಆಯೋಜಿಸಿದ್ದ ಮಹಿಷಾಶುರ ಮರ್ದಿನಿ ಎಂಬ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಪೌರಾಣಿಕ ನಾಟಕಗಳು ನೀತಿಯುಕ್ತವಾಗಿದ್ದು ದುಷ್ಟರ ಶಿಕ್ಷೆ ಮತ್ತು ನಿಷ್ಟರ ರಕ್ಷೆಯನ್ನು ಒಳಗೊಂಡಿರುತ್ತದೆ ಮಹಾ ಭಾರತ, ರಾಮಾಯಣ ಮಹಾಕಾವ್ಯದ ಕತೆಗಳು ನಮಗೆ ನ್ಯಾಯ ಮಾರ್ಗದಲ್ಲಿ ಹೋಗುವುದನ್ನು ತಿಳಿಸುತ್ತವೆ. ಅನ್ಯಾಯ ಮಾರ್ಗದಲ್ಲಿ ನಡೆದವರಿಗೆ ಪ್ರಾರಂಭದಲ್ಲಿ ಯಶಸ್ಸು ಸಿಗಬಹುದು, ಆದರೆ ಅಂತಿಮವಾಗಿ ಕಷ್ಟದಲ್ಲಿ ಸಿಲುಕಬೇಕಾಗುತ್ತದೆ ಆದ್ದರಿಂದಲೇ ನಮ್ಮ ಜನಪದರು ತಮಗೊದಗಿ ಬರುವ ಸಂಕಷ್ಟಗಳನ್ನು ಮರೆಯಲು, ಕಷ್ಟ ,ಮೋಸವಾದವರಿಗೆ ಖಂಡಿತ ಸುಖ ನ್ಯಾಯ ಸಿಗುತ್ತೆದೆಂದು ಧೈರ್ಯ ಮೂಡಿಸುವ ಸಲುವಾಗಿ ಪೌರಾಣಿಕ ನಾಟಕಗಳನ್ನು ಆರಂಭಿಸಿದರು ಗ್ರಾಮೀಣ ಪ್ರದೇಶದ ಜನತೆ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ನಮ್ಮ ಪರಂಪರೆಯ ರಕ್ಷಣೆಗೆ ಸದಾ ಮಂದಾಗಬೇಕೆಂದು ಮನವಿ ಮಾಡಿದರು.
ಸಮಾಜಸೇವಕ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ ನೀತಿ ಮತ್ತು ಮೌಲ್ಯಯುತ ಸಂದೇಶ ಸಾರುವ ಪೌರಾಣಿಕ ನಾಟಕಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಉತ್ತಮವಾಗುತ್ತದೆ ಎಂದರು. ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಪೌರಾಣಿಕ ನಾಟಕಗಳ ಮಹತ್ವ ಮತ್ತು ಅದನ್ನು ಮಂಡ್ಯ ಜಿಲ್ಲೆಯ ಜನ ಬದುಕಿನ ಉಸಿರಾಗಿಸಿಕೊಂಡ ವಿಚಾರಗಳ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್,ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ರಾಮಚಂದ್ರ,ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್,ತಾ.ಪಂ.ಮಾಜಿ ಸದಸ್ಯ ಮಾದವಪ್ರಸಾದ್,ಪುಟ್ಟಸ್ವಾಮೀಗೌಡ ಗ್ರಾಮದ ಮುಖಂಡರಾದ ದೊಡ್ಡಪಾಪೇಗೌಡ, ಬಿ.ಟಿ.ಪ್ರಕಾಶ್, ಬಿ.ವಿ.ಪುಟ್ಟರಾಜು, ಬಿ.ಎಸ್.ನಂದೀಶ್, ಬಿ.ಸಿ.ರಮೇಶ್, ಯೋಗೇಶ್, ಬಿ.ವಿ ಮಾದು, ಉಮೇಶ್, ಮೆಡಿಕಲ್ ಅಶೋಕ್, ಸೇರಿದಂತೆ ಹಲವರು ಭಾಗವಹಿಸಿದ್ದರು.