ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿಗೆ ಆಹ್ವಾನ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.6; ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಮತ್ತು  ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ವತಿಯಿಂದ “ಬಸವ ಜಯಂತಿ ಅಂಗವಾಗಿ ಮನೆಯಂಗಳದಲ್ಲಿ ಮಕ್ಕಳ ಹಬ್ಬ”  ಹೆಸರಿನಲ್ಲಿ ” ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿ ” ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಗೀತಾ ಭರಮಸಾಗರ ತಿಳಿಸಿದ್ದಾರೆ.ಐದನೇ ತರಗತಿ ಯಿಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳು ಕವಿಗೋಷ್ಟಿಯಲ್ಲಿ ಭಾಗವಹಿಸಬಹುದು.ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವುದು. ಮೊಬೈಲ್ ಗೀಳಿನಿಂದ ಮಕ್ಕಳು ಹೊರಬಂದು ಬರಹದ ಕಡೆ ಗಮನಕೊಡುವುದನ್ನು ಕಲಿಸುವುದು, ವಿದ್ಯಾರ್ಥಿಗಳು ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಮಾತನಾಡುವುದನ್ನು ಕಲಿಸುವುದು, ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಹೊಸ ಕವಿಗಳನ್ನು ಹುಡುಕುವ ಜೊತೆಗೆ ಪ್ರೋತ್ಸಾಹ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಗೀತಾ ಭರಮಸಾಗರ ಅವರು ತಿಳಿಸಿದ್ದಾರೆ.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ  ತಮ್ಮ ಆಧಾರ್ ಕಾರ್ಡ್,  ಭಾವಚಿತ್ರ ದೊಂದಿಗೆ ಪೋನ್ ನಂಬರ್ ಹಾಕಿ ಅಂಚೆ ಅಥವಾ ಕೋರಿಯರ್ ಮೂಲಕ  ಈ ಕೆಳಗಿನ ವಿಳಾಸಕ್ಕೆ ಕವಿತೆಗಳನ್ನು ಕೈ ಬರಹದಲ್ಲಿ ಬರೆದು  ಕಡ್ಡಾಯವಾಗಿ ಕಳುಹಿಸಬೇಕು. ಜೊತೆಗೆ Gmail: rushigurukula@gmail.com,  ಈ ವಿಳಾಸಕ್ಕೆ ಟೈಪ್ ಮಾಡಿ ಮೇಲ್ ಕಳಿಸಿ ಎಂದು ತಿಳಿಸಿದ್ದಾರೆ. ಉತ್ತಮ ಮತ್ತು ಸುಂದರ ಕೈ ಬರಹಕ್ಕೆ ಸೂಕ್ತ ಬಹುಮಾನ ವಿರುತ್ತದೆ. ಕವಿತೆಗಳನ್ನು ಕಳುಹಿಸುವ ವಿಳಾಸಆಡಳಿತಾಧಿಕಾರಿಗಳು : ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ (ರಿ). ನಂ 315/ಬಿ. ಒಂದನೇ ಅಡ್ಡ ರಸ್ತೆ, ಹತ್ತನೇ ಮುಖ್ಯ ರಸ್ತೆ. ಐಯುಡಿಪಿ ಬಡಾವಣೆ. ಚಿತ್ರದುರ್ಗ. 577501
ಹೆಚ್ಚಿನ ಮಾಹಿತಿಗಾಗಿ: 8073744244. 9113694200
ಸಂಪರ್ಕಿಸಲು ಕೋರಲಾಗಿದೆ.