ಲೋಕಸಭಾ ಚುನಾವಣೆಗೆ   ಜಗಳೂರು ತಾಲೂಕು ಆಡಳಿತ ಸನ್ನದ್ದ
ಜಗಳೂರು.ಮೇ.೬ -: ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 263 ಮತಗಟ್ಟೆಗಳಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗ ಳನ್ನು ಒದಗಿಸಿದೆ ಇದರಲ್ಲಿ 5 ಸಖಿ ಮತಗಟ್ಟೆ ಗಳು.1 ವಿಶೇಷ ಚೇತನರ ನಿರ್ವಹಣೆ ಮತಗಟ್ಟೆ.1 ಧ್ಯೇಯ ಆಧಾರಿತ ಮತಗಟ್ಟೆ 1 ಯುವಜನ ನಿರ್ವಹಣೆ ಮತಗಟ್ಟೆ 1ಸಾಂಪ್ರದಾಯಿಕ ಮತ ಗಟ್ಟೆಗಳನ್ನು ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಪಟ್ಟಣ ಪಂಚಾ ಯಿತಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಕಾರದೊಂದಿಗೆ ಮತಗಟ್ಟೆಯ ಕಟ್ಟಡಗಳಲ್ಲಿ ತಂಗುವ ಸಿಬ್ಬಂದಿಗಳಿಗೆ ಅಗತ್ಯ ಕುಡಿಯುವ ನೀರು ಶೌಚಾಲಯ ಊಟ ದ ವ್ಯವಸ್ಥೆ ರ‍್ಯಾಕ್ ಸೌಲಭ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ ಚುನಾವಣೆಗೆ ಜಗಳೂರು ವಿಧಾನಸಭಾ ಕ್ಷೇತ್ರ ಸಕಲ ರೀತಿಯ ಸಜ್ಜುಗೊಂಡಿದೆ ಸಹಾಯಕ ಚುನಾವಣಾಧಿಕಾರಿ ಶಿದ್ರಾಮ ವೈ ಮಾರಿಹಾಳ. ವೆಚ್ಚ ವೀಕ್ಷಕರಾಗಿ ಪ್ರತಿಭಾ ಸಿಂಗ್  ಸಾಮಾನ್ಯ ವೀಕ್ಷಕರಾಗಿ ಲಕ್ಷ್ಮಿದೇವಿ ಇವರ ಮೂಲಕ ಮತಗಟ್ಟೆಗಳ ಪರಿಶೀಲನೆ ನಡೆಸಿದ್ದಾರೆ. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1 ಅತಿ ಸೂಕ್ಷ್ಮ ಮತಗಟ್ಟೆ 49 ಸೂಕ್ಷ್ಮ ಮತಗಟ್ಟೆ 214 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 157 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟ್ ಕಾಸ್ಟಿಂಗ್ ಕ್ಯಾಮರಗಳನ್ನು ಅಳವಡಿಸಲಾಗಿದೆ.ಗ್ರಾಮೀಣ ಭಾಗಗಳಲ್ಲಿ ಸಣ್ಣಪುಟ್ಟ ದೊಂಬಿ ಗಲಾಟೆ ನಡೆಯದಂತೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಗ್ರಾಮ ಗಳ ಮತಗಟ್ಟೆಗಳನ್ನು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನಿಗವಹಿಸಿದೆ.ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1,98815 ಅದರಲ್ಲಿ 1,00046 ಪುರುಷ ಮತದಾರರಿದ್ದಾರೆ ಮಹಿಳೆಯರು – 98 759 ಮತದಾರರಿದ್ದಾರೆ 10- ಮಂದಿ ತೃತೀಯಲಿಂಗಿಗಳಿದ್ದಾರೆ ಲೋಕಸಭಾ ಚುನಾವಣಾ ಸಂಬಂಧ 31 ಮುಂದಿ ಸೆಕ್ಟರ್ ಅಧಿಕಾರಿಗಳು. ಎಸ್‌ಎಸ್‌ಟಿ 5. ಎಫ್.ಎಸ್.ಟಿ 3. ವಿ.ವಿ.ಟಿ 1 ವಿ.ಎಸ್‌.ಟಿ 2. ಎ.ಎಲ್‌.ಎಂ.ಟಿ.ಎಸ್ 2 ಮಂದಿ ಅಧಿಕಾರಿಗಳ ನ್ನು ನೇಮಿಸಲಾಗಿದೆ ಒಟ್ಟು ತಾಲೂಕಿನಲ್ಲಿ 5 ಕಡೆ ಚೆಕ್ ಪೋಸ್ಟ್ ಗಳು ಬಿದರಿಕೆರೆ. ಗಡಿಮಾಕುಂಟೆ. ಕುರೇಮಾಗನಹಳ್ಳಿ.ಮುಸ್ಟೂ ರು.ಕಾನನಕಟ್ಟೆ ಗಳಲ್ಲಿ ತೆರೆಯಲಾಗಿ ಬಾರಿ ಬಿಗಿ ಭದ್ರತೆ ತಪಾ ಸಣೆ ನಡೆಸಲಾಗುತ್ತಿದೆ.ಜಗಳೂರು ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದಲ್ಲಿ ತಾತ್ಕಾಲಿಕವಾಗಿ ಭದ್ರತಾ ಕೊಠಡಿಗಳನ್ನು ಗುರುತಿಸಲಾಗಿದ್ದು ಅಲ್ಲಿ ಮತಯಂತ್ರಗಳನ್ನು ವಿ.ವಿ.ಎಂ ಮಿಷನ್ ಗಳನ್ನ ಭದ್ರ ವಾಗಿ ಇಡಲಾಗಿದೆ ಚುನಾವಣೆ ನಡೆಯುವ ಪ್ರಕ್ರಿಯೆಗಳನ್ನು 1232 ಚುನಾವಣಾ ಸಿಬ್ಬಂದಿಗಳಿಗೆ ಈಗಾಗಲೇ ಅಗತ್ಯ ತರ ಬೇತಿ ನೀಡಲಾಗಿದ್ದು ಪಿ.ಆರ್.ಓ – 308 ಎಪಿಆರ್ ಓ-308  ಪಿ ಓ-616 ಚುನಾವಣಾ ಸಿಬ್ಬಂದಿಗಳು ಇದೇ ಮೇ 6 ಸೋಮ ವಾರ ನಿಗದಿತ ಮತ ಗಟ್ಟೆಗಳಿಗೆ ಮತಯಂತ್ರಗಳೊಂದಿಗೆ ತೆರಳ ಲಿದ್ದಾರೆ ಮರುದಿನ ಮೇ 7 ಮಂಗಳವಾರ ಬೆಳಿಗ್ಗೆ 7:00 ಗಂಟೆ ಯಿಂದ ಸಂಜೆ 6:00 ವರೆಗೆ ಮತದಾನ ನಡೆಯಲಿದೆ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಕೂಡ ಸನ್ನದ್ದವಾಗಿದೆ ಈಗಾಗ ಲೇ ಕೇಂದ್ರ ಭದ್ರತಾ ಪಡೆ ಜಗಳೂರು ತಾಲೂಕು ಮಟ್ಟದ ಪ್ರತಿ ಗ್ರಾಮ ಪಂಚಾಯತಿ ಮತ್ತು ಅತಿ ಸೂಕ್ಷ್ಮ. ಸೂಕ್ಷ್ಮ ಹಳ್ಳಿಗಳಲ್ಲಿ ಪಥ ಸಂಚಲನ ನಡೆಸಿದ್ದು ಜಗಳೂರು ಪೊಲೀಸ್ ಕೂಡ ಭದ್ರತಾ ಲೋಪ ವಾದಂತೆ ಕಟ್ಟೆಚ್ಚರ ವಹಿಸಿದೆ ಒಟ್ಟಾರೆ ಜಗ ಳೂರು ತಾಲೂಕು ಆಡಳಿತ ಶಾಂತಿಯುತ ಚುನಾವಣೆಗೆ ಸಕಲ ರೀತಿಯಲ್ಲಿ ತಯಾರು ನಡೆಸಿದೆ ಈಗಾಗಲೇ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚುನಾವಣಾ ಬಹಿರಂಗಪ್ರಚಾರ ಮುಗಿದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶಿದ್ರಾಮ ವೈ ಮಾರಿಹಾಳ ಅವರು ಸಂಜೆವಾಣಿ ದಿನಪತ್ರಿಕೆಗೆ ತಿಳಿಸಿದ್ದಾರೆ.