ಸಂವಿಧಾನ ರಕ್ಷಣೆ, ಎಲ್ಲಾ ವರ್ಗದವರ ಹಿತ ಕಾಪಾಡಲಾಗುವುದು:ಪ್ರಭಾ ಮಲ್ಲಿಕಾರ್ಜುನ್‌

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೬: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 1,6,5 ಮತ್ತು 45ನೇ ವಾರ್ಡ್ಗಳಲ್ಲಿ ವ್ಯಾಪ್ತಿಯಲ್ಲಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್  ಮತಯಾಚಿಸಿದರು.ನಂತರ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಈ ಭಾಗದ ಪೌರಕಾರ್ಮಿಕರು ಮತ್ತು ಬಡವರಿಗೆ ಸೂರು ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ಯಾರು ಮರೆಯಬಾರದು. ಸೂರು ಕಲ್ಪಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.ಅದೇ ರೀತಿ ರಾಜ್ಯ ಸರ್ಕಾರ ನೀಡುವ ಯೋಜನೆಗಳನ್ನು ಯಾವುದೇ ಏಜೆಂಟ್‌ರು ಇಲ್ಲದೇ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನನ್ನನ್ನು ಬೆಂಬಲಿಸಿದAತೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮಾಡಬೇಕೆಂದು ಕರೆ ನೀಡಿದರು.ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ಸಂವಿಧಾನ ರಕ್ಷಣೆ ಮತ್ತು ಎಲ್ಲಾ ವರ್ಗಗಳ ಹಿತ ಕಾಪಾಡುವುದು ನನ್ನ ಧ್ಯೇಯ ಎಂದು ತಿಳಿಸಿ ಈ ಭಾಗದಲ್ಲಿ ನಮ್ಮ ಮಾವನವರು ಅಭಿವೃದ್ಧಿ ಮಾಡಿದ್ದು, ಅವರಿಗೆ ಸದಾ ಬೆಂಬಲಿಸುತ್ತಿರುವ ತಾವುಗಳು ನನ್ನನ್ನು ಬೆಂಬಲಿಸಬೇಕೆAದು ಮನವಿ ಮಾಡಿದರು.