ಸದಸ್ಯತ್ವ ಅಭಿಯಾನದಲ್ಲಿ ಯುವಮೋರ್ಚಾ ಸಕ್ರಿಯವಾಗಲಿ : ಸಂತೋಷ ರೆಡ್ಡಿ
ಔರಾದ : ಸೆ.22:ಬಿಜೆಪಿ ತನ್ನ ಸಂಘಟನಾ ರಚನೆಯನ್ನು ಬಲಪಡಿಸುವ ಉದ್ದೇಶದಿಂದ ಸೆಪ್ಟೆಂಬರ್ 2 ರಿಂದ ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಸುತ್ತಿದೆ ಈ ನಿಟ್ಟಿನಲ್ಲಿ ಯುವಮೋರ್ಚಾ ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕೆಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ ಹೇಳಿದರು.
ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಹಿಂದೆ ಬಿಜೆಪಿ ಎಂದರೆ ಮೇಲ್ವರ್ಗದವರ ಪಕ್ಷ ಎನ್ನುತ್ತಿದ್ದರು. ಆದರೀಗ ಎಲ್ಲ ವರ್ಗದವರೂ ಪಕ್ಷದಲ್ಲಿ ಇದ್ದಾರೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದು ನಮ್ಮ ಸಿದ್ಧಾಂತವಾಗಿದೆ’ ಕಾರ್ಯಕರ್ತರು ಸಂಘಟಿತರಾಗಬೇಕು. ಕ್ಷೇತ್ರದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡುವ ಮೂಲಕ ಪಕ್ಷವನ್ನು ಬಲಿಷ್ಟಗೊಳಿಸಬೇಕೆಂದು ತಿಳಿಸಿದರು.
ಯುವಮೋರ್ಚಾ ಜಿಲ್ಲಾ ಪ್ರಭಾರಿ ಗುರುನಾಥ ರಾಜಗೀರಾ ಮಾತನಾಡಿ ಪ್ರತಿ ಆರು ವರ್ಷಗಳಿಗೊಮ್ಮೆ ಬಿಜೆಪಿಯು ಸದಸ್ಯತ್ವ ಅಭಿಯಾನದ ಸಮಯದಲ್ಲಿ, ಅಸ್ತಿತ್ವದಲ್ಲಿರುವ ಸದಸ್ಯರನ್ನು ನವೀಕರಿಸುವುದರ ಜೊತೆಗೆ ಹೊಸ ಸದಸ್ಯರನ್ನು ಮಾಡುತ್ತದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಿದ್ದು ಔರಾದ ಕ್ಷೇತ್ರದಲ್ಲಿ ಶಾಸಕ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಪಕ್ಷವು ಬಹಳ ಸಕ್ರಿಯವಾಗಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು ಯುವಮೋರ್ಚಾದ ಎಲ್ಲ ಕಾರ್ಯಕರ್ತರು ಕೂಡ ಸದಸ್ಯತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೇಶ ಸ್ವಾಮಿ ಮಾತನಾಡಿ ಸದಸ್ಯತ್ವ ಅಭಿಯಾನವನ್ನು ಕೇವಲ ಸಂಖ್ಯಾತ್ಮಕ ದೃಷ್ಟಿಯಿಂದಲ್ಲದೆನೆ ಕೌಟುಂಬಿಕ ಮತ್ತು ಸೈದ್ಧಾಂತಿಕ ಅಭಿಯಾನವೆಂದು ಪರಿಗಣಿಸಿ ಸಕ್ರೀಯರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತಮೋರ್ಚಾ ಅದ್ಯಕ್ಷ ಶಿವರಾಜ ಅಲ್ಮಾಜೆ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹಳ್ಳೆ, ಕಾರ್ಯದರ್ಶಿ ಶರದ ಧನಗೆ ಪ್ರಮುಖರಾದ ಆನಂದ ದ್ಯಾಡೆ, ಸಂದೀಪ ಪಾಟೀಲ, ಸುನೀಲ ಸುಸಲಾದೆ, ಗಣೇಶ ಭಾಲ್ಕೆ, ಪ್ರಶಾಂತ ದೇಶಮುಖ, ಅಂಬಾದಾಸ ನೇಳಗೆ, ಅಶೋಕ ಶೆಂಬೆಳ್ಳಿ, ಸೇರಿದಂತೆ ಇತರರಿದ್ದರು.