ತಂದೆ ತಾಯಿ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿ ಅವರ ಋಣ ತೀರಿಸಲಾಗದು : ಶಿವಾನಂದ ದಿವಾನಮಳ
ಅಥಣಿ :ಸೆ.22: ಜೀವನದಲ್ಲಿ ಯಾರ ಋಣ ಬೇಕಾದರೂ ತೀರಿಸಬಹುದು ಆದರೆ ತಂದೆ ತಾಯಿಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಜೀವನದಲ್ಲಿ ಭಗವಂತನ ಹತ್ತಿರ ಏನಾದರೂ ಬೇಡಬೇಕೆಂದು ಕೊಂಡರೆ, ತಂದೆ-ತಾಯಿಗೆ ದೀರ್ಘಾಯುಷ್ಯ ಬೇಡಿ ಕೊಳ್ಳಿ, ಯಾಕೆಂದರೆ. ನಿಮ್ಮನ್ನು ಅವರಷ್ಟು ಪ್ರೀತಿ ಮಾಡುವವರು ಈ ಪ್ರಪಂಚದಲ್ಲೇ ಯಾರು ಇಲ್ಲ ಎಂದು ಶಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಉದ್ಯಮಿಗಳು ಶಿಕ್ಷಣ ಪ್ರೇಮಿಗಳು ಹಾಗೂ ರಾಜಕೀಯ ಧುರೀಣರಾದ ಶಿವಾನಂದ ದಿವಾನಮಳ ಅವರ ತಂದೆ ಸಂತರಾಮ ದಿವಾನಮಳ ತಾಯಿ ಚಂದ್ರವ್ವ ದಿವಾನಮಳ ಅವರ 41 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ತಂದೆ ತಾಯಿ ಅವರ ಮನಸ್ಸನ್ನು ಯಾವತ್ತು ನೋಯಿಸಬಾರದು ಅವರ ಮನಸ್ಸು ನೋಯಿಸಿದರೆ ಆ ಪರಮಾತ್ಮನ ಮನಸ್ಸು ನೋಯಿಸಿದಂತೆ ತಂದೆ-ತಾಯಿಗಳಿಗೆ ನಾವು ಯಾವತ್ತು ಋಣಿಯಾಗಿರಬೇಕು. ನಾವೆಷ್ಟೇ ಜನ್ಮವೆತ್ತಿ ಅವರ ಸೇವೆ ಮಾಡಿದರೂ ಅವರ ಋಣ ತೀರಿಸಲಾಗದು. ಶಿವಾನಂದ ದಿವಾನಮಳ ಅವರ ಕುಟುಂಬ ಸೇವಾ ಮನೋಭಾವ ಅಧ್ಯಾತ್ಮಿಕ ಧಾರ್ಮಿಕ ಕ್ಷೇತ್ರದಲ್ಲಿ ಗುರು ಪರಂಪರೆಯುಳ್ಳ ಕುಟುಂಬವಾಗಿದ್ದು ಇಂದು ಅವರ ತಂದೆ ತಾಯಿ ಪುಣ್ಯ ಸ್ಮರಣೆ ಮಾಡುವ ಮೂಲಕ ಮಠಾಧೀಶರನ್ನು ಕರೆಸಿ ಅವರಿಂದ ಆರ್ಶೀವಚನ. ಭಜನೆ ಹಾಗೂ ದೇವರ ನಾಮಸ್ಮರಣೆ ಮಾಡುತ್ತಿರುವುದು ಗುರು ಪಂರಪರೆ ಸಾಕ್ಷಿಯ ಪ್ರತೀಕ, ಯಾರು ದೇವರಲ್ಲಿ ಭಯ ಭಕ್ತಿ ಇರುತ್ತದೆ ಅವರು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ. ಮುಗ್ದ ಸ್ವಭಾವದ ಸರಳ ಸಜ್ಜನ ವ್ಯಕ್ತಿತ್ವದ ಶಿವಾನಂದ ದಿವಾನಮಳ ಅವರ ಸುಸಂಸ್ಕøತ ಮನೆತನಕ್ಕೆ ತಂದೆ ತಾಯಿಗಳ ಸಂಸ್ಕಾರದ ಆಶೀರ್ವಾದ ಕಾರಣ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳು ಹಾಗೂ ರಾಜಕೀಯ ಧುರೀಣರಾದ ಶಿವಾನಂದ ದಿವಾನಮಳ ಮಾತನಾಡಿ ಮಾತೃ ದೇವೋಭವ ಪಿತ್ರು ದೇವೋಭವ ಎನ್ನುವಂತೆ ಪ್ರತಿಯೊಬ್ಬರೂ ತಂದೆತಾಯಿಗಳನ್ನ ದೇವರ ಸ್ಥಾನದಲ್ಲಿಟ್ಟು ಗೌರವಿಸಬೇಕು, ತಂದೆ ತಾಯಿಯನ್ನು ಕಳೆದುಕೊಂಡ ಮೇಲೆಯೇ ಅವರ ಬೆಲೆ ಗೊತ್ತಾಗುತ್ತದೆ ನಾವು ಎಷ್ಟೇ ಜನ್ಮ ಎತ್ತಿದರು ತಂದೆ ತಾಯಿಯ ಋಣವ ತೀರಿಸಲಾಗದು ಪ್ರತಿಯೊಬ್ಬ ತಂದೆ ತಾಯಿಯೂ ತನ್ನ ಮಕ್ಕಳನ್ನು ಬೆಳೆಸಲು ಎಷ್ಟು ಶ್ರಮ ಪಡುತ್ತಾರೆ ಅಂತಹ ಕರುಣಾಮಯಿ ಹಾಗೂ ತ್ಯಾಗಮಯಿಯ ತಂದೆ ತಾಯಿಯ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದರೆ ಅವರ ಪ್ರಿ?ತಿಗೆ ಪಾತ್ರರಾದಂತೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸದಾಶಿವ ಬುಟಾಳಿ. ಮಹಾದೇವ ಹೊನ್ನೂಳಿ. ಮಲ್ಲಿಕಾರ್ಜುನ ಗೋಟಖಿಂಡಿ. ಬಸವರಾಜ ಬುಟಾಳಿ. ಶ್ರೀಶೈಲ ನಾಯಿಕ. ಸೈಬಣ್ಣಾ ಕಮತಗಿ. ಗಿರೀಶ ಬುಟಾಳಿ. ರಾವಸಾಬ ಐಹೊಳೆ. ಹಣಮಂತ ಕಾಲುವೆ. ಅರುಣ ಬಾಸಿಂಗಿ. ನರಸು ಭಡಕಂಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು
ಜಗತ್ತನ್ನಾಳುವ ಎರಡೇ ಎರಡು ಶಬ್ದಗಳೆಂದರೆ ತಂದೆ ತಾಯಿ. ಅವರ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಅವರ ಋಣ. ಸಹನೆ, ತಾಳ್ಮೆ, ತ್ಯಾಗ ಅಂತಃಕರುಣೆಯನ್ನು ಜಗತ್ತಿನ ಯಾವುದೇ ಭಾಷೆಯಲ್ಲಿ ವರ್ಣಿಸಲು ಸಾಧ್ಯವಿಲ್ಲ ನಾವು ಎಷ್ಟೆ? ಎತ್ತರಕ್ಕೆ ಬೆಳೆದರೂ ತಂದೆ ತಾಯಿಯನ್ನ ಸದಾ ಸ್ಮರಿಸಬೇಕು ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಬೇಕು ಅವರ ಕಣ್ಣಲ್ಲಿ ಒಂದು ಹನಿ ಕಣ್ಣೀರು ಬರದಂತೆ ನೋಡಿಕೊಳ್ಳಬೇಕು ಅದು ನಮ್ಮ ಜವಾಬ್ದಾರಿ.
ಶಿಕ್ಷಣ ಪ್ರೇಮಿಗಳು ಹಾಗೂ ರಾಜಕೀಯ ಧುರೀಣರು