ಪರಿಹಾರ ನೀಡದಕ್ಕೆ ಕೆ.ಎಸ್.ಅರ್.ಟಿ.ಸಿ. ಸೀಜ್
ಸಂಜೆವಾಣಿ ವಾರ್ತೆ
ಸಂಡೂರು :ಸೆ: 22 : ಸಂಡೂರು ನ್ಯಾಯಾಲಯವು 16.08.2024ರಂದು ಕೆ.ಎಸ್.ಅರ್.ಟಿ.ಸಿ. ಹೊಸಪೇಟೆ ವಿಭಾಗದ ಬಸ್ ವಶಪಡಿಸಿಕೊಳ್ಳಲು ಅದೇಶ ನೀಡಿದ ಅಪರೂಪದ ಘಟನೆ ವರದಿಯಾಗಿದೆ.
ದಿನಾಂಕ 25.04.2019ರಂದು ಸಂಡೂರು ತಾಲೂಕಿನ ಹೆಚ್.ಅರ್.ಜಿ ಕ್ರಾಸ್ ಹತ್ತಿರ, ಧರ್ಮಾಪುರ ಹೊರವಲಯದಲ್ಲಿ ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಕೆ.ಎಸ್.ಅರ್.ಟಿ.ಸಿ. ಬಸ್ , ಸಂಖ್ಯೆ: ಕೆ.ಎ.35 ಎಫ್ : 285 ಹಾಗೂ ಬೈಕ್ ಡಿಕ್ಕಿಯ ಪರಿಣಾಮ ಸ್ಥಳದಲ್ಲಿಯೇ ಬೈಕ ಸವಾರರಾದ ಪಾಂಡುರಂಗ (28) ಹಾಗೂ (ಕ್ಲಿನರ್ ಕೆಲಸಕ್ಕೆ) ನಾಗರಾಜ(27) ಸಾವನ್ನಪ್ಪಿದ್ದು,
ಸಂಡೂರು ನ್ಯಾಯಾಲಯದಲ್ಲಿ ಪಾಂಡುರಂಗ ಅವರ ಪತ್ನಿ ಮಾರೆಕ್ಕ ಮತ್ತು ಇತರರು ನಾಣ್ಯಾಪುರ ಗ್ರಾಮ, ದಶಮಾಪುರ ಪಂಚಾಯಿತಿ, ಹಗರಿಬೊಮ್ಮನಹಳ್ಳಿ ತಾಲೂಕು, ಪ್ರಸ್ತುತ ವಾಸ ಸಂಡೂರು ತಾಲೂಕು ಕೃಷ್ಣಾನಗರ ಗ್ರಾಮ ಬಳ್ಳಾರಿ ಜಿಲ್ಲೆ ಇವರು ದೂರನ್ನು ದಾಖಲಿಸಿದ್ದರು ಎಂ.ವಿ.ಸಿ ನಂ. 565/2019 ಅಗಿರುತ್ತದೆ, ವಕೀಲರಾದ ಮಲ್ಲಪ್ಪ ಅರಳಿ ಹಾಗೂ ಹೇಮರಡ್ಡಿ ಎಂ. ಇವರು ದೂರು ದಾರರ ಪರವಾಗಿ ವಾದ ಪ್ರತಿವಾದದ ನಂತರ ನ್ಯಾಯಾಲಯವು ದಿನಾಂಕ: 05.11.2022 ರಂದು ದೂರುದಾರರ ಪರವಾಗಿ 28,31,056.00 ಪರಿಹಾರವನ್ನು ಮತ್ತು ಬಡ್ಡಿ (6%) (2019 ರಿಂದ) ಮೊತ್ತ 5,94,522.00, ಇತರ ಒಟ್ಟು ಮೊತ್ತ: 34,43,798.00 ರೂಪಾಯಿಗಳನ್ನು  ಕೆ.ಎಸ್.ಅರ್.ಟಿ.ಸಿ. ಹೊಸಪೇಟೆ ವಿಭಾಗೀಯ ಅಧಿಕಾರಿಗಳು ಹೊಸಪೇಟೆ ಇವರು ನೀಡಬೇಕೆಂದು ನ್ಯಾಯಾಧೀಶರಾದ ಹಿರಿಯ ಶ್ರೇಣಿಯ ನ್ಯಾಯಾಧೀಶ ಯೋಗೇಶ್.ಎಂ. ಅವರು ಅದೇಶ ನೀಡಿದ್ದರು,
ಅದರೆ ಕೆ.ಎಸ್.ಅರ್.ಟಿ.ಸಿ. ಹೊಸಪೇಟೆ ಘಟಕದವರು ಯಾವುದೇ ರೀತಿ ಪರಿಹಾರ ನೀಡದೇ ಇದ್ದ ಪರಿಣಾಮ ನ್ಯಾಯಾಲಯವು 16.08.2024 ರಂದು ಹೊಸಪೇಟೆ ವಿಭಾಗದ ಯಾವುದಾದರೂ ಬಸ್ಸನ್ನು ಸೀಜ್ ಮಾಡಬೇಕೆಂದು ಅದೇಶಿಸಿದೆ. ಪರಿಣಾಮ ಕೆ.ವಿಜಯಕುಮಾರ (ಅಮೀನ್ ವಶಪಡಿಸಿಕೊಂಡ ಅಧಿಕಾರಿಗಳು) ವಾರಂಟೆನ್ನು ನೀಡಿ ಇಂದು ಪಟ್ಟಣದ ಪುರಸಭೆಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಬಸ್ ಸಂಖ್ಯೆ: ಕೆ.ಎ.35/ಎಫ್. 0211 ವಶಪಡಿಸಿಕೊಂಡಿದೆ
.
ಈ ಸಂದರ್ಭದಲ್ಲಿ ವಕೀಲರಾದ ಮಲ್ಲಪ್ಪ ಅರಳಿಯವರು ಪ್ರತಿಕ್ರಿಯಿಸಿ ನ್ಯಾಯಾಲಯದ ಅದೇಶವನ್ನು ಪರಿಗಣಿಸದ ಸರ್ಕಾರದ ಅಧೀನದಲ್ಲಿರುವ ಕೆ.ಎಸ್.ಅರ್.ಟಿ.ಸಿಯು ದೂರುದಾರರಿಗೆ ಪರಿಹಾರವನ್ನು ನೀಡಿಲ್ಲ, ಅವರ ಬದುಕು ಕಷ್ಟವಾಗಿದೆ, ಅಲ್ಲದೆ ಸರ್ಕಾರ ಕೋಟ್ಯಾಂತರ ಹಣವನ್ನು ಉಚಿತ ಬಸ್ ಸಂಚಾರಕ್ಕೆ ನೀಡುತ್ತಿದೆ ಅದರೆ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರ ನೀಡಲು ಹಣವಿಲ್ಲದಂತಹ ದುಸ್ಥಿತಿ ಉಂಟಾಗಿರುವುದು ಕಂಡು ಬರುತ್ತಿದೆ, ಅದ್ದರಿಂದ ಸರ್ಕಾರ ಕೆ.ಎಸ್.ಅರ್.ಟಿ.ಸಿ. ಘಟಕದ ಮೂಲಕ ತಕ್ಷಣ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ಬಡಕುಟುಂಬವನ್ನು ರಕ್ಷಿಸಬೇಕೆಂದರು.
ಪಟ್ಟಣದ ಪುರಸಭೆಯಿಂದ ನ್ಯಾಯಾಲಯದ ಅದೇಶದಂತೆ ಹೊಸಪೇಟೆ ವಿಭಾಗದ ಕೆ.ಎಸ್.ಅರ್.ಟಿ.ಸಿ. ಬಸ್ಸನ್ನು ಸೀಜ್ ಮಾಡಿದೆ ಬಸ್ ಸಂಖ್ಯೆ: ಕೆ.ಎ.35/ಎಫ್. 0211 ಈ ಸಂದರ್ಭದಲ್ಲಿ ಸಾವನ್ನಪ್ಪಿದ ಕುಟುಂಬದ ಸದಸ್ಯರು, ವಕೀಲರಾದ ಅರಳಿ ಮಲ್ಲಪ್ಪ ಇದ್ದರು.