ಕುಂದು ಕೊರತೆಯ ಸಭೆ – ವಿವಿಧ ಸಂಘಟನೆಗಳು ಮನವಿ ಪತ್ರ ಸಲ್ಲಿಕೆ
ಸಂಜೆವಾಣಿ ವಾರ್ತೆ
ಸಂಡೂರು: ಸೆ: 22:   ಪಟ್ಟಣದ ತಾಲೂಕು ಕಚೇರಿಯಲ್ಲಿ ಬಳ್ಳಾರಿ ಲೋಕಾಯುಕ್ತ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಕುಂದು ಕೊರತೆ ಸಭೆಯ ನಡೆಯಿತು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸಂಡೂರುತಾಲೂಕು ಬಳ್ಳಾರಿ ಜಿಲ್ಲೆ ಸೂರಿ ನಾರಾಯಣ ಭವನ ತೋರಣಗಲ್ಲು ಗ್ರಾಮ ಮಾನ್ಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬಳ್ಳಾರಿ ಇವರಲ್ಲಿ ಪ್ರಮುಖವಾಗಿ 2019-2020ನೇ ಸಾಲಿನ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯ ಉತ್ಪನ್ನ ಚಟುವಟಿಕೆ ಯೋಜನೆ ಅಡಿಯಲ್ಲಿ ಸಾಲ ಮತ್ತು ಸಹಾಯಧನವನ್ನು ಜಮಾಅಗದೇ ಇದ್ದು ಅದರಿಂದ ವಿಪರೀತ ಸಮಸ್ಯೆಯಾಗಿದೆ ತಕ್ಷಣ ಪರಿಹರಿಸಿಕೊಂಡಿ ಎಂದು ದೇವದಾಸಿ ಸಂಘದ ಅಧ್ಯಕ್ಷೆ ದುರುಗಮ್ಮ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ [CITU],ಬಳ್ಳಾರಿ ಜಿಲ್ಲಾ ಸಮಿತಿ ಹಾಗೂ ಸಂಡೂರು ತಾಲೂಕು ಘಟಕದಿಮದ ಮನವಿಯನ್ನು ಸಲ್ಲಿಸಿದ ಜೆ.ಎಂ .ಚನ್ನಬಸಯ್ಯ ಅವರು ಮಾತನಾಡಿ ಸರ್ಕಾರಿ ದಾಖಲೆಗಳ ಡಯಾಗ್ಲಾಟ್ ಪ್ರಕಾರ 50- 60 ವರ್ಷಗಳಿಂದ ವಾಸವಾಗಿರುವ ಸ್ಥಳವು ಕುರೆಕುಪ್ಪ ಸ ನಂ 321/ಎ2, ಹಾಗೂ 321/ಎ3 ಕಾಲಂ 3 ಮತ್ತು 4ರಲ್ಲಿ ಜಿಡಿ ಕಾಲಂ 9 ರಲ್ಲಿ ಸ ನಂ 321/ಎ ರ ವಿಸ್ತೀರ್ಣ 13.94 ಎಕ್ಕರೆ ಹಾಗೂ 321 /ಬಿ ಯ ವಿಸ್ತೀರ್ಣ 0.26 ಎಕ್ಕರೆ ಸರ್ಕಾರಿ ಜಮೀನ್ ಆಗಿರುತ್ತದೆ ಇದರ ಕೆಲವು ಭಾಗವು ರೈಲ್ವೆ ಇಲಾಖೆಗೆ ಮೀಸಲಿಟ್ಟು ಜಮೀನು ಆಗಿರುತ್ತದೆ. ಕೈ ಬರಹದ ಪಹಣಿಗಳಲ್ಲಿ 1985 ರ ನಂತರ 321/ಎ ರ ತುಂಡು ಭೂಮಿ ಇದು ಎಕರೆ 90 ಗುಂಟೆ ಎಚ್ ಎಚ್ ಗುಂಡಣ್ಣ ತಂದೆ ಹೋಳೆ ಸೀಮೆ ಹನುಮಂತಪ್ಪ ರಾಂಪುರ ಅದೇ ಭೂಮಿಯ 3 ಎಕ್ರೆ 55 ಗುಂಟೆ ರಾಮ ನಾರಾಯಣ ಶಾರದ ಎಂಬ ಅನಾಮಿಕರ ಹೆಸರುಗಳು ಕಬ್ಜಾ ಅಥವಾ ಸ್ವಾಧೀನ ಕಾಲಂ ಗಳಲ್ಲಿ ಕೈಬರಹದಿಂದ ಸೇರ್ಪಡೆಗೊಂಡಿದೆ.
ಈ ಭೂಮಿಗಳನ್ನು ಬೀಳ ಯಾವುದೇ ಕೃಷಿ ಚಟುವಟಿಕೆ ನಡೆದಿರುವುದಿಲ್ಲ ಎಂದು ದಾಖಲೆಗಳು ತಿಳಿಸಿರುತ್ತವೆ. ದಿನಾಂಕ 13.3.2007 ರಂದು ರಾಮ ನಾರಾಯಣ ಶಾರದ ಎಂಬುವವರಿಂದ ಶ್ರೀಮತಿ ಚುಕ್ಕಿ ಭಾಯಿ ಎಂಬುವರು ರಾಮನಾರಾಯಣ ಶಾರದಾ ಎಂಬವರು ದಿನಾಂಕ 26.01.1999 ರಂದು ಪೋತಿಯಾಗಿರುತ್ತಾರೆ ಎಂದು ತಿಳಿಸಿ ಹಕ್ಕು ಬದಲಾವಣೆ ಪಡೆದಿರುತ್ತಾರೆ. ದಿನಾಂಕ 18 12 2008 ರಂದು ಎಚ್ ಟಿ ನಾಗರೆಡ್ಡಿ ತಂದೆ ಹೊಸಕೋಟೆ ತಿಮ್ಮಪ್ಪ ಎಂಬುವರು ಕ್ರಯದಾರರಾಗಿದ್ದು ನಾಗರೆಡ್ಡಿ ತಂದೆ ಹೊಸಗೇರಪ್ಪ ತಿಮ್ಮಪ್ಪ ಯಂದು ಜಂಟಿ ಪಟ್ಟಾ ವರ್ಗಾವಣೆ ಮಾಡಿ ಆದೇಶಿಸಿದೆ. ಎಲ್ಲಾ ಸುಳ್ಳು ದಾಖಲೆಗಳು ಸೃಷ್ಟಿ ಕಂಡು ಬರುತ್ತದೆ ಅದ್ದರಿಂದ ಇಲ್ಲಿಯೇ ವಾಸಮಾಡುವವರಿಗೆ ಹಕ್ಕು ಪತ್ರ ನೀಡಿ ಎಂದು ಒತ್ತಾಯಿಸಿದರು.
ಲೋಕಾಯುಕ್ತ ಅಧಿಕಾರಿಗಳು ಪ್ರತಿಯೊಬ್ಬರೂ ಸಹ ಮುಕ್ತವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದೀರಾ ಅದಕ್ಕೆ ಬೇಕಾದ ರೀತಿಯಲ್ಲಿ ಕ್ರಮ ವಹಿಸುವುದಾಗಿ , ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಿಳಿಸುವ ಮೂಲಕ ಬಗೆಹರಿಸಲು ಕ್ರಮಯವಹಿಸಿದರು, ತಹಶೀಲ್ದಾರ್ ಅನಿಲ್ ಕುಮಾರ್ ಅಹವಾಲುಗಳ ಕುರಿತು ಮಾಹಿತಿ ನೀಡಿದರು.