ಹಸಿವು ನೀಗಿಸೋಣ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಸಂಡೂರು:ಸೆ: 22 :  ತಾಳೂರು ಅಮ್ಮಾ ಸಂಸ್ಥೆಯ ವತಿಯೀಂದ ತೋರಣಗಲ್ಲಿನ ಎಸ್.ಕೆ.ಸಿ. ಕಂಪ್ಯೂಟರ್ ರವರ ಸಹಕಾರದಿಂದ ಗುರು ರಾಯರ ಉಚಿತ ಅನ್ನದಾಸೋಹ ಸೇವೆ ನೆರವೇರಿತು.
ಉಚಿತ ದಾಸೋಹ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿಗಳಾದ ಸೋನಿ, ಗೋಪಾಲರಾವ್, ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಮ್ಮಸಂಸ್ಥೆಯ ಅಧ್ಯಕ್ಷರಾದ ಕವಿತಾ ರುದ್ರಗೌಡ, ಉಪಾಧ್ಯಕ್ಷರಾದ ಜ.ರಾಘವೇಂದ್ರ ಸದಸ್ಯರಾದ ರುದ್ರಮ್ಮ, ಪಂಪಾಪತಿ, ಶರಣಬಸವ ಮಂಜುನಾಥ ಇವರ ನೇತೃತ್ವದಲ್ಲಿ ನಡೆಯಿತು. ಬಾಣಂತಿಯರನ್ನು, ರೋಗಿಗಳನ್ನು ಸೇರಿ 147ಕ್ಕೂ ಹೆಚ್ಚು ಜನರಿಗೆ ಹಸಿವು ನೀಗಿಸಿಕೊಂಡರು ಗುರುರಾಯರ ಕೃಪೆಗೆ ಭಾಜನರಾದರು.