ಜಿಲ್ಲಾ ಮಟ್ಟದ ಯೋಗ ಸ್ಪರ್ಥೆಗೆ 4 ವಿದ್ಯಾರ್ಥಿಗಳು ಆಯ್ಕೆ
ಸಂಜೆವಾಣಿ ವಾರ್ತೆ
ಸಂಡೂರು: ಸೆ: 22 : ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೇಯಲ್ಲಿ ಸಂಡೂರು ಪಟ್ಟಣದ 6ನೇ ವಾರ್ಡನ ವಿದ್ಯಾರ್ಥಿಗಳಾದ ಶಾಂತ, ಮದಿಯಾ, ಗಣೇಶ ಮತ್ತು ಭರತಕುಮಾರ್ ವಿಭಾಗಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಶಾಲೆಯ ಮುಖ್ಯಗುರುಳಾದ ಅರುಂಧತಿಯವರು ತಿಳಿಸಿದ್ದಾರೆ. ಯೋಗ ಸ್ಪರ್ಧೇಯಲ್ಲಿ ವಿಜೇತರಾದ ನಾಲ್ಕು ಮಕ್ಕಳ ಸಾಧನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್. ಅಕ್ಕಿ ಸಮನ್ವಯ ಅಧಿಕಾರಿ ಶರಣಪ್ಪ ಕರಿಶೆಟ್ರು ಪ್ರಭುದೇವರಯ್ಯ, ಪಾಲಕ್ಷ್ಯಯ್ಯ, ಜಕಣಾಚಾರಿ ಅಭಿನಂದಿಸಿದ್ದಾರೆ.