ರೈತರ ಜಮೀನುಗಳಲ್ಲಿ ಉಂಟಾದ ಹಾನಿ ಕುರಿತು ಸಮೀಕ್ಷೆ ನಡೆಸಲು- ಜನಸಂಗ್ರಾಮ ಪರಿಷತ್ತು ಒತ್ತಾಯ
ಸಂಜೆವಾಣಿ ವಾರ್ತೆ
ಸಂಡೂರು: ಸೆ: 22   ಸಂಡೂರು ತಾಲೂಕಿನ ನರಸಿಂಗಾಪುರ ಗ್ರಾಮ ಪಂಚಾಯಿತಿಯ ರಣಜಿತಪುರ ಗ್ರಾಮ ವ್ಯಾಪ್ತಿಯಲ್ಲಿರುವ ರಣಜಿತಪುರ ಇನ್ಪ್ರಾಸ್ಟ್ರಕರ್ ಸ್ಪಾಂಜ್ ಐರನ್ ಕಾರ್ಖಾನೆಯ ತ್ಯಾಜ್ಯದಿಂದ ರೈತರ ಜಮೀನುಗಳಲ್ಲಿ ಉಂಟಾದ ಹಾನಿಯ ಕುರಿತು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಜನಸಂಗ್ರಾಮ ಪರಿಷತ್ ಸಂಘಟನೆಯಿಂದ ತಹಶೀಲ್ದಾರ್ ಅನಿಲ್ ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಖಾನೆಯ ವಿಷಕಾರಿ ಧೂಳು ಕೃಷಿ ಭೂಮಿ, ಕಾಡಿನ ಗಿಡಮರಗಳ ಮೇಲೆ ಬೀಳುತ್ತದೆ, ಸಸಿಗಳನ್ನು ಪ್ರಾಣಿಗಳು, ಜಾನುವಾರುಗಳು ತಿನ್ನುವುದರಿಂದ ಅವುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಅಲ್ಲದೆ ಸ್ಥಳೀಯರು ಅಸ್ತಮಾ, ಕ್ಯಾನ್ಸರ್ ಚರ್ಮ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಕಣಿವೆ ಪ್ರದೇಶಗಳಿಂದ ಹಲವಾರು ನಾಲಲೆಗಳ ಮೂಲಕ ನಾರಿಹಳ್ಳಕ್ಕೆ ಹರಿದು ಬರುವ ನೀರಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿದ್ದು ಉದ್ಯಮಕ್ಕೆ ಬಳಸಲಾಗುತ್ತಿದೆ. ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತದೆ ಚೆಕ್ ಪೋಸ್ಟ್ ನಿರ್ಮಿಸಿಕೊಂಡು ಕಬ್ಬಿಣದ ಗಏಟ್ ಅಳವಡಿಸಿರುವುದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆಯ ಉದ್ದಿಮೆಯ ಪರವಾನಿಗೆ ಪಡೆಯದೇ ಇರುವುದರಿಂದ ಇದನ್ನು ಶಾಶ್ವತವಾಗಿ ಮುಚ್ದಲು ಗ್ರಾಮಪಂಚಾಯಿತಿಯಿಂದ ಈಚೆಗೆ ನಿರ್ಧಾರಿಸಲಾಗಿದೆ. ಕಾರ್ಖಾನೆಯಿಂದ ಬೆಳೆಗೆ ನಷ್ಟವಾಗಿರುವುದನ್ನು ಸಮೀಕ್ಷೆ ನಡೆಸಿ ಪರಿಹಾರವನ್ನು ಸಂಬಂಧಿಸಿದ ರೈತರಿಗೆ ಕೊಡಿಸಬೇಕೆಂದು ಅದೇಶಿಸಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಮಾದವರೆಡ್ಡಿ, ಶ್ರಿಶೈಲ ಅಲ್ದಳ್ಳಿ, ಜಿ.ಕೆ. ನಾಗರಾಜ. ಟಿಎಂ.ಶಿವಕುಮರ, ವಿಶ್ವನಾಥ ಮೂಲೀಮನಿ, ಈರಣ್ಣ, ಕಾಡಪ್ಪ ಪರಮೇಶ್ವರಪ್ಪ. ಕೆ.ಬಿ. ಮೌನೇಶ್, ಅಹಲವಾರು ಕೆಂಗಣ್ಣ, ಗಂಗಣ್ಣ, ಪಂಪಾಪತಿ ಇತರರು ಇದ್ದರು